Mysore
30
few clouds

Social Media

ಶನಿವಾರ, 14 ಫೆಬ್ರವರಿ 2026
Light
Dark

ಆರ್‌ಬಿಐಗೆ ಲಷ್ಕರ್‌-ಎ-ತೊಯ್ಬಾದಿಂದ ಬಾಂಬ್‌ ಬೆದರಿಕೆ ಸಂದೇಶ

ಮುಂಬೈ: ಲಷ್ಕರ್‌-ಎ-ತೊಯ್ಬಾದ ಸಿಇಒ ಎಂದು ಹೇಳಿಕೊಂಡು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗ್ರಾಹಕ ಸೇವಾ ಸಂಖ್ಯೆಗೆ ಬೆದರಿಕೆಯ ಸಂದೇಶ ರವಾನೆಯಾಗಿದೆ.

ಆರ್‌ಬಿಐ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಭದ್ರತಾ ಸಿಬ್ಬಂದಿ ನೀಡಿದ ದೂರಿನನ್ವಯ ಮಾತಾ ರಮಾಬಾಯಿ ಮಾರ್ಗದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮುಂಬೈನಲ್ಲಿರುವ ಜೆಎಸ್‌ಎ ಕಾನೂನು ಸಂಸ್ಥೆ ಬಲ್ಲಾರ್ಡ್‌ ಪೇರ್‌ ಹಾಗೂ ಜೆಎಸ್‌ಎ ಕಚೇರಿ ಕಮಲಾ ಮಿಲ್‌ ಲೋವರ್‌ ಪರ್ಲ್‌ಗೆ ಬಾಂಬ್‌ ಬೆದರಿಕೆ ಇಮೇಲ್‌ ಸಂದೇಶ ರವಾನಿಸಲಾಗಿದೆ. ಆದರೆ ಬೆದರಿಕೆ ಸಂದೇಶದಲ್ಲಿ ಕಂಪನಿಯ ಇಮೇಲ್‌ ಐಡಿಯಲ್ಲಿ ಫರ್ಜಾನ್‌ ಅಹ್ಮದ್‌ ಎಂದು ಬರೆಯಲಾಗಿದ್ದು, ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

Tags:
error: Content is protected !!