Mysore
34
few clouds

Social Media

ಗುರುವಾರ, 09 ಏಪ್ರಿಲ 2026
Light
Dark

ರೈಲ್‌ಒನ್‌ ಆಪ್‌ : ಒಂದೇ ಕಡೆ ಸಿಗಲಿದೆ ರೈಲು ಸೌಲಭ್ಯಗಳು

ಬೆಂಗಳೂರು : ಭಾರತೀಯ ರೈಲ್ವೆಯು ತನ್ನ ಅಧಿಕೃತ ಆಪ್ ‘ರೈಲ್‌ಒನ್’ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ರೈಲ್ವೆ ಸೇವೆಗಳೆಲ್ಲವೂ ಒಂದೇ ಕಡೆ ಲಭ್ಯವಾಗಲಿವೆ. ‘ರೈಲ್‌ಒನ್’ ಆಪ್‌ನಲ್ಲಿ ಪ್ರಯಾಣಿಕರಿಗೆ ಹಲವು ಆಯ್ಕೆಗಳಿದ್ದು, ರೈಲ್ವೆ ಸೇವೆಗಳನ್ನು ಸುಲಭವಾಗಿ ಪಡೆಯಬಹುದಾಗಿದೆ.

ಇದರಲ್ಲಿ ಹಲವು ಸೌಲಭ್ಯಗಳ ಆಯ್ಕೆಗಳಿದ್ದು, ರೈಲ್ವೆ ಪ್ರಯಾಣವನ್ನು ಸುಗಮಗೊಳಿಸುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ‘ರೈಲ್‌ಒನ್’ ಆಪ್ ಮೂಲಕ ಪ್ರಯಾಣಿಕರು, ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕಾಯ್ದಿರಿಸಿದ ಟಿಕೆಟ್, ಕಾಯ್ದಿರಿಸದ ಟಿಕೆಟ್ ಹಾಗೂ ಪ್ಲಾಟ್ ಫಾರ್ಮ್ ಟಿಕೆಟ್, ಸೀಸನ್ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಾಗಿದೆ. ಇದರೊಂದಿಗೆ ರೈಲುಗಳ ಹುಡುಕಾಟ, ಪಿಎನ್‌ಆರ್ ಸ್ಥಿತಿ, ಕೋಚ್ ವಿವರ ಮತ್ತು ರೈಲು ಎಲ್ಲಿದೆ ಎಂಬ ನೈಜ ಸಮಯದ ಮಾಹಿತಿ ಸೇರಿದಂತೆ ಹಲವು ಸುಧಾರಿತ ವೈಶಿಷ್ಟ್ಯಗಳು ಈ ಆಪ್‌ನಲ್ಲಿ ಲಭ್ಯವಿದೆ.

‘ರೈಲ್‌ಒನ್’ ಆಪ್ ಮೂಲಕ ಕಾಯ್ದಿರಿಸದ ಟಿಕೆಟ್‌ಗಳನ್ನು ಬುಕ್ ಮಾಡುವ ಪ್ರಯಾಣಿಕರಿಗೆ ಶೇ.3ರಷ್ಟು ರಿಯಾಯಿತಿ ಲಭಿಸಲಿದೆ. ಈ ಆಪ್‌ನಲ್ಲಿ ಯುಪಿಐ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಹಾಗೂ ನೆಟ್ ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ರೀತಿಯ ಡಿಜಿಟಲ್ ಪಾವತಿ ಆಯ್ಕೆಗಳನ್ನು ಬಳಸಿ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಾಗಿದೆ.

ರೈಲ್‌ಒನ್ ಆಪ್ ಗೂಗಲ್ ಪ್ಲೇ ಸ್ಟೋರ್ ಮತ್ತು ಐಒಎಸ್ ಆಪ್ ಸ್ಟೋರ್ ನಲ್ಲಿ ಉಚಿತವಾಗಿ ಲಭ್ಯವಿದೆ. ಭಾರತೀಯ ರೈಲ್ವೆಯು ತನ್ನ ಹಳೆಯ ‘ಯುಟಿಎಸ್ ಆನ್ ಮೊಬೈಲ್’ ಆಪ್ ಸೇವೆಗಳನ್ನು 2026ರ ಮಾರ್ಚ್ 1, ಹಂತ ಹಂತವಾಗಿ ಸ್ಥಗಿತಗೊಳಿಸಲಿದೆ.

Tags:
error: Content is protected !!