Mysore
28
scattered clouds

Social Media

ಶುಕ್ರವಾರ, 10 ಏಪ್ರಿಲ 2026
Light
Dark

ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ಮತ್ತೆ ವಾಗ್ದಾಳಿ

rahulgandhi

ನವದೆಹಲಿ: ಭಾರತ-ಅಮೇರಿಕಾ ಮಧ್ಯಂತರ ವ್ಯಾಪಾರ ಒಪ್ಪಂದ ಕುರಿತು ಕೇಂದ್ರ ಸರ್ಕಾರದ ಒಪ್ಪಂದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಭಾರತೀಯ ರೈತರಿಗೆ ದ್ರೋಹ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ರಾಹುಲ್‌ ಗಾಂಧಿ ಅವರು, ನರೇಂದ್ರ ಮೋದಿ ಅವರಿಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.

ದೇಶ ತನ್ನ ಕೃಷಿ ಕ್ಷೇತ್ರದ ಮೇಲೆ ದೀರ್ಘಾವಧಿಯ ಹಿಡಿತ ಪಡೆಯಲು ಮತ್ತೊಂದು ರಾಷ್ಟ್ರಕ್ಕೆ ಅವಕಾಶ ನೀಡುತ್ತಿದೆಯೇ ಎಂದು ಅವರು ಕೇಳಿದ್ದಾರೆ.

ಅಮೇರಿಕಾ ವ್ಯಾಪಾರ ಒಪ್ಪಂದದ ಹೆಸರಿನಲ್ಲಿ ಭಾರತೀಯ ರೈತರಿಗೆ ದ್ರೋಹ ಮಾಡುವುದನ್ನು ನಾವು ನೋಡುತ್ತಿದ್ದೇವೆ ಎಂದು ರಾಹುಲ್‌ ಗಾಂಧಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

 

Tags:
error: Content is protected !!