Mysore
33
clear sky

Social Media

ಸೋಮವಾರ, 16 ಮಾರ್ಚ್ 2026
Light
Dark

ಪಂಜಾಬ್‌ | ಪಾಕ್‌ ಪೋಷಿತ ಉಗ್ರ ಘಟಕದ ಮೇಲೆ ದಾಳಿ, ಇಬ್ಬರ ಬಂಧನ

Operation Akhal Three more terrorists killed

ಅಮೃತಸರ : ಪಂಜಾಬ್‌ ಪೊಲೀಸರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪೋಷಿತ ಭಯೋತ್ಪಾದಕ ಘಟಕವೊಂದನ್ನು ಭೇದಿಸಿ, ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.

ಅಮೃತಸರ ಗ್ರಾಮೀಣ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಐಎಸ್‌ಐ ಬೆಂಬಲಿತ ಭಯೋತ್ಪಾದನೆ ಮತ್ತು ಗಡಿ ದಾಟಿದ ಶಸ್ತ್ರಾಸ್ತ್ರ ಕಳ್ಳಸಾಗಣೆ ಕೃತ್ಯವನ್ನು ತಡೆದಂತಾಗಿದೆ ಎಂದು ಪಂಜಾಬ್‌ ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.

ಬಂಧಿತರು ಗುರ್ಸೇವಕ್ ಸಿಂಗ್ ಅಲಿಯಾಸ್ ಸೂರಜ್ ಮತ್ತು ಅಮರಜೀತ್ ಸಿಂಗ್ ಅಲಿಯಾಸ್ ರೋಹಿತ್ ಎಂದು ಗುರುತಿಸಲಾಗಿದೆ. ಅವರಿಂದ ಒಂದು ಎಕೆ-47 ರೈಫಲ್ (2 ಮ್ಯಾಗಜೀನ್‌ಗಳು ಮತ್ತು 36 ಸಜೀವ ಗುಂಡುಗಳೊಂದಿಗೆ), ಮೂರು ಗ್ಲಾಕ್ 9ಎಂಎಂ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶಂಕಿತರು ಸಾಮಾಜಿಕ ಜಾಲತಾಣಗಳ ಮೂಲಕ ವಿದೇಶಿಗರೊಂದಿಗೆ ಸಂಪರ್ಕದಲ್ಲಿದ್ದರು. ಘಟಕವು ಭಾರತ ವಿರೋಧಿ ಮತ್ತು ಪೊಲೀಸ್ ವಿರೋಧಿ ಪ್ರಚಾರದಲ್ಲೂ ಭಾಗಿಯಾಗಿತ್ತು ಎಂದು ತಿಳಿದುಬಂದಿದೆ. ಘರಿಂಡಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಇಡೀ ನೆಟ್‌ವರ್ಕ್‌ ಅನ್ನು ಬಹಿರಂಗಗೊಳಿಸಲು ತನಿಖೆ ಮುಂದುವರೆದಿದೆ.

ಇದಕ್ಕೂ ಮುನ್ನ ಜನವರಿ 1, 2026ರಂದು ಹಿಮಾಚಲ ಪ್ರದೇಶದ ನಲಗಢ ಪೊಲೀಸ್ ಠಾಣೆಯಲ್ಲಿ ನಡೆದ ಆರ್‌ಡಿಎಕ್ಸ್ ಆಧಾರಿತ ಐಇಡಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಇಬ್ಬರನ್ನು ಫೆಬ್ರವರಿ 22ರಂದು ಬಂಧಿಸಲಾಗಿತ್ತು. ಆ ಪ್ರಕರಣದಲ್ಲೂ ವಿದೇಶಿ ಮಾರ್ಗದರ್ಶನದ ಸೂಚನೆಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:
error: Content is protected !!