ಲಕ್ನೋ: ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್, ಮಾತಾ ಅಮೃತಾನಂದಮಯಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ದೈವಿಕ ದೇವಾಲಯದಲ್ಲಿ ಶ್ರೀ ರಾಮ ಯಂತ್ರ ಪ್ರತಿಷ್ಠಾಪಿಸಲಾಯಿತು.
ಅವರು ರಾಮಲಲ್ಲಾ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ಆರತಿ ಬೆಳಗಿದರು. ಸಮಸ್ತ ಜನರು ಸಂತೋಷ, ಸೌಹಾರ್ದತೆಯಿಂದ ಇರಲೆಂದು ದೇವರಲ್ಲಿ ರಾಷ್ಟ್ರಪತಿ ಪ್ರಾರ್ಥಿಸಿದರು.




