Mysore
27
haze

Social Media

ಗುರುವಾರ, 01 ಜನವರಿ 2026
Light
Dark

ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು, ದೇಶ ಹಾಗೂ ವಿಶ್ವದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

ಅಷ್ಟೇ ಅಲ್ಲದೇ ದೇಶದಲ್ಲಿ ಶಾಂತಿ ನೆಲೆಸಲು, ಪ್ರಜೆಗಳಿಗೆ ಉತ್ತಮ ಆರೋಗ್ಯ ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ತಮ್ಮ ಎಕ್ಸ್‌ ಸಂದೇಶದಲ್ಲಿ ಅವರು, ಮುಂಬರುವ ವರ್ಷವು ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ಹಾಗೂ ನೀವು ಮಾಡುವ ಎಲ್ಲದರಲ್ಲೂ ಸಾಧನೆಯೊಂದಿಗೆ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ. ನಮ್ಮ ಸಮಾಜದಲ್ಲಿ ಶಾಂತಿ ಹಾಗೂ ಸಂತೋಷ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

2026ಕ್ಕೆ ನಿಮ್ಮೆಲ್ಲರಿಗೂ ಶುಭಾಶಯಗಳು. ಈ ವರ್ಷವು ಎಲ್ಲರಿಗೂ ಹೊಸ ಭರವಸೆಗಳು, ಹೊಸ ನಿರ್ಣಯಗಳು ಹಾಗೂ ಹೊಸ ಆತ್ಮವಿಶ್ವಾಸವನ್ನು ತರಲಿ ಎಂದು ನಾವು ಬಯಸುತ್ತೇವೆ. ಜೀವನದಲ್ಲಿ ಮುನ್ನಡೆಸಲು ಪ್ರತಿಯೊಬ್ಬರಿಗೂ ಪ್ರೇರಣೆ ನೀಡಲಿ ಎಂದು ಮೋದಿ ಮೋದಿ ಆಶಿಸಿ ಸಂಸ್ಕೃತ ಶ್ಲೋಕ ಹಂಚಿಕೊಂಡಿದ್ದಾರೆ.

ಜ್ಞಾನ, ನಿರ್ಲಿಪ್ತತೆ, ಸಂಪತ್ತು, ಶೌರ್ಯ, ವೈಭವ, ಶಕ್ತಿ ಮತ್ತು ಸ್ಮರಣಶಕ್ತಿ, ಸ್ವಾತಂತ್ರ್ಯ ಕೌಶಲ್ಯ ಕಾಂತಿ ತಾಳ್ಮೆ ಸೌಮ್ಯತೆ ಎಂಬ ಅರ್ಥದ ಶ್ಲೋಕ ಹಂಚಿಕೊಂಡಿದ್ದಾರೆ.

 

Tags:
error: Content is protected !!