Mysore
31
scattered clouds

Social Media

ಶುಕ್ರವಾರ, 07 ಫೆಬ್ರವರಿ 2025
Light
Dark

ಪ್ರಯಾಗ್‌ ರಾಜ್‌: ನಾಳೆ ಮಹಾಕುಂಭಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ನವದೆಹಲಿ: ಪ್ರಯಾಗ್ರಾಜ್‌ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಭೇಟಿ ನೀಡಲಿದ್ದು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿ ಅವರು ನಾಳೆ(ಫೆಬ್ರವರಿ.5) ಬೆಳಿಗ್ಗೆ 10.05 ಗಂಟೆಗೆ ಪ್ರಯಾಗ್‌ ರಾಜ್‌ನ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಬೆಳಿಗ್ಗೆ 10.10 ಗಂಟೆಗೆ ಡಿಪಿಎಸ್‌ ಹೆಲಿಪ್ಯಾಡ್‌ಗೆ ಪ್ರಯಾಣಿಸಿ, ನಂತರ 10.45 ಗಂಟೆಗೆ ಏರಿಯಲ್‌ ಘಾಟ್‌ಗೆ ತೆರಳಲಿದ್ದಾರೆ. ಬಳಿಕ 10.50 ಗಂಟೆಗೆ ಏರಿಯಲ್‌ ಘಾಟ್‌ನಿಂದ ಮಹಾಕುಂಭಮೇಳಕ್ಕೆ ದೋಣಿಯಲ್ಲಿ ಪ್ರಯಾಣಿಸಲಿದ್ದಾರೆ. ಆ ವೇಳೆ ಅವರು ಬೆಳಿಗ್ಗೆ 11.00 ರಿಂದ 11.30 ಗಂಟೆಯವರೆಗೂ ಸಂಗಮ್‌ ಘಾಟ್‌ನಲ್ಲಿ ಸ್ನಾನ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನೂ ತ್ರಿವೇಣಿ ಸಂಗಮದಲ್ಲಿ ಸ್ನಾನದ ನಂತರ ಪ್ರಧಾನಿ ಮೋದಿ ಅವರು, ಸಂತರೊಂದಿಗೆ ಸಂವಹನ ನಡೆಸುವ ನಿರೀಕ್ಷೆಯಿದೆ. ಅಲ್ಲದೇ ಈ ವೇಳೆ ಮಹಾಕುಂಭಮೇಳದಲ್ಲಿ ಭಾಗವಹಿಸುವ ಲಕ್ಷಾಂತರ ಯಾತ್ರಾರ್ಥಿಗಳಿಗೆ ಮಾಡಲಾದ ವ್ಯವಸ್ಥೆಗಳನ್ನು ಪರಿಶೀಲಿಸಲಿದ್ದಾರೆ.

ಅಲ್ಲಿಂದ ಬೆಳಿಗ್ಗೆ 11.45ಕ್ಕೆ ಅವರು ದೋಣಿಯಲ್ಲಿ ಏರಿಯಲ್‌ ಘಾಟ್‌ಗೆ ಹಿಂತಿರುಗಿದ ಬಳಿಕ ಡಿಪಿಎಸ್‌ ಹೆಲಿಪ್ಯಾಡ್‌ನಿಂದ ಪ್ರಯಾಗ್‌ ರಾಜ್‌ ವಿಮಾನ ನಿಲ್ದಾಣಕ್ಕೆ ವಾಪಾಸ್‌ ಆಗುತ್ತಾರೆ. ಇನ್ನೂ ಮಧ್ಯಾಹ್ನ 12.30 ಗಂಟೆಗೆ ವಾಯುಪಡೆಯ ವಿಮಾನದಲ್ಲಿ ದೆಹಲಿಗೆ ಹಿಂತುರಗಲಿದ್ದಾರೆ.

 

Tags: