Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ದೆಹಲಿಗೆ ಅಪ್ಪಳಿಸಿದ ʼಅನಾಹುತʼ: ಎಎಪಿ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ದೆಹಲಿಗೆ ಅಪ್ಪಳಿಸಿದ ಅನಾಹುತ ಎಂದು ಹೇಳುವ ಮೂಲಕ ಎಎಪಿ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ರೋಹಿಣಿ ಪ್ರದೇಶದಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರವನ್ನು ತೊಡೆದು ಹಾಕುವ ಮೂಲಕ ದೆಹಲಿ ಅಭಿವೃದ್ದಿಗೆ ಒತ್ತು ನೀಡಲಿದೆ. ಜೊತೆಗೆ ಯಾವುದೇ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಿಂದ ಎಎಪಿ ಸರ್ಕಾರವು ದೆಹಲಿಯನ್ನು ಅಭಿವೃದ್ದಿ ಮಾಡಿಲ್ಲ. ʼಡಬಲ್‌ ಇಂಜಿನ್‌ʼ ಸರ್ಕಾರದಿಂದ ಅಭಿವೃದ್ಧಿಯ ವೇಗ ಹೆಚ್ಚಲಿದೆ. ಆದ್ದರಿಂದ ದೆಹಲಿಯಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ರಾಷ್ಟ್ರ ರಾಜಧಾನಿಯ ಅಭಿವೃದ್ಧಿಗೆ ಅವಕಾಶ ಕಲ್ಪಿಸಿ ಎಂದರು.

ಎಎಪಿ ಸರ್ಕಾರವನ್ನು ದೆಹಲಿಯಲ್ಲಿ ಕಿತ್ತೆಸೆದು ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ದಿ ಸಾಧಿಸಲು ಬಿಜೆಪಿ ಶ್ರಮಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು, ಉತ್ತರ ಪ್ರದೇಶದ ಸಾಹಿಬಾಬಾದ್‌ನಿಂದ ದೆಹಲಿಯ ನ್ಯೂ ಆಶೋಕ್‌ ನಗರದವರೆಗಿನ 13 ಕಿ.ಮೀ ದೂರದ ದೆಹಲಿ-ಮೀರತ್‌ ಪ್ರಾದೇಶಿಕ ರಾಪಿಡ್‌ ಟ್ರಾನ್ಸಿಟ್ ಸಿಸ್ಟಂ (ಆರ್‌ಆರ್‌ಟಿಎಸ್‌) ಕಾರಿಡಾರ್ ಉದ್ಘಾಟಿಸಿದರು.

Tags:
error: Content is protected !!