Mysore
25
light rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

ಗೂಗಲ್‌ ಮತ್ತು ನಿವಿಡಿಯಾ ಸಿಇಒಗಳಿಂದ ಪ್ರಧಾನಿ ನರೇಂದ್ರ ಮೋದಿಗೆ ಶ್ಲಾಘನೆ

ನ್ಯೂಯಾರ್ಕ್‌: ಪ್ರಧಾನಿ ಮೋದಿ ನೇತೃತ್ವದಲ್ಲಿಂದು 15 ಟೆಕ್‌ ಸಿಇಒಗಳೊಡನೆ ದುಂಡು ಮೇಜಿನ ಸಭೆ ನಡೆಯಿತು. ಈ ವೇಳೆ ಗೂಗಲ್‌ ಸಿಇಒ ಸುಂದರ್‌ ಪಿಚೈ ಹಾಗೂ ನಿವಿಡಿಯಾ ಸಿಇಒ ಜೆನ್ಸೆನ್‌ ಹುವಾಂಗ್‌ ಅವರು ನರೇಂದ್ರ ಮೋದಿಯನ್ನು ಶ್ಲಾಘಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 3 ದಿನಗಳ ಕಾಲ ಅಮೆರಿಕಾದ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ದುಂಡು ಮೇಜಿನ ಸಭೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾಧ್ಯಮಗಳೊಡನೆ ಮಾತನಾಡಿದ ಗೂಗಲ್‌ ಸಿಇಒ ಸುಂದರ್‌ ಪಿಚೈ, ಭಾರತ ದೇಶದ ಜನರಿಗೆ ಉಪಯುಕ್ತವಾಗುವ ಹಾಗೇ ಎಐ ಬೆಳವಣಿಗೆ ಹೊಂದಬೇಕು ಎಂದು ಮೋದಿ ಬಯಸುತ್ತಾರೆ ಎಂದು ಹೇಳಿದರು.

ನಂತರ ಸೆಮಿಕಂಡಕ್ಟರ್‌ ಚಿಪ್‌ ಕಂಪನಿ ನಿವಿಡಿಯಾದ ಸಿಇಒ ಜೆನ್ಸೆನ್‌ ಹುವಾಂಗ್‌ ಮಾತನಾಡಿ, ನರೇಂದ್ರ ಮೋದಿ ಅವರು ತಂತ್ರಜ್ಞಾನದ ಬಗ್ಗೆ ಪ್ರತಿಕ್ಷಣ ತಿಳಿದುಕೊಳ್ಳಲು ಬಯಸುವ ಅಪೂರ್ವ ವಿದ್ಯಾರ್ಥಿ ಎಂದು ಶ್ಲಾಘಿಸಿದ್ದಾರೆ.

 

Tags: