Mysore
27
broken clouds

Social Media

ಬುಧವಾರ, 28 ಜನವರಿ 2026
Light
Dark

ಇಂದಿನಿಂದ ಬಜೆಟ್‌ ಅಧಿವೇಶನ| ಐತಿಹಾಸಿಕ ಬಿಲ್‌ಗಳ ಮಂಡನೆಯಾಗಲಿದೆ: ಪ್ರಧಾನಿ ಮೋದಿ

ನವದೆಹಲಿ: ಇಂದಿನಿಂದ ಕೇಂದ್ರ ಬಜೆಟ್‌ ಅಧಿವೇಶನ ಪ್ರಾರಂಭವಾಗಿದ್ದು, ಈ ಬಾರಿ ಐತಿಹಾಸಿಕ ಬಿಲ್‌ಗಳ ಮಂಡನೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸಂಸತ್‌ ಭವನದ ಬಳಿ ಇಂದು(ಜನವರಿ.31) ಕೇಂದ್ರ ಬಜೆಟ್‌ ಕುರಿತು ಮಾತನಾಡಿದ ಅವರು, ನಾಳೆ(ಫೆ.1) ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತರಾಮನ್‌ ಅವರು ಕೇಂದ್ರ ಬಜೆಟ್‌ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್‌ ಅಧಿವೇಶನದಲ್ಲಿ ದೇಶದ ಅಭಿವೃದ್ಧಿಗಳ ಬಗ್ಗೆ ಅನೇಕ ರೀತಿಯ ಯೋಜನೆಗಳನ್ನು ಜಾರಿಗೊಳಿಸಲು ಚಿಂತಿಸಲಾಗಿದೆ. ಅಲ್ಲದೇ ಯುವಕರನ್ನು ಗಮನದಲ್ಲಿಟ್ಟಿಕೊಂಡು ಯೋಜನೆಗಳನ್ನು ಜಾರಿ ತರಲಾಗುವುದು ಎಂದರು.

ಇಂದಿನ ಸಂಸತ್‌ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಸುಗಮ ಕಲಾಪಗಳಿಗೆ ಅವಕಾಶ ಮಾಡಿಕೊಡಬೇಕು. ದೇಶದ ಬಡವರಿಗೂ ಲಕ್ಷ್ಮೀದೇವಿಯ ಕೃಪೆ ಸಿಗಲಿ ಎಂದು ವಿರೋಧ ಪಕ್ಷಗಳ ಸದಸ್ಯರಿಗೆ ಮನವಿ ಮಾಡಿದರು.

ಇನ್ನೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದಿನ ಕೇಂದ್ರ ಬಜೆಟ್‌ ಅಧಿವೇಶನದಲ್ಲಿ ಸಂಸತ್‌ ಸದನವನ್ನು ಉದ್ದೇಶಿಸಿ ಕೆಲವೇ ಕ್ಷಣಗಳಲ್ಲಿ ಭಾಷಣ ಮಾಡಲಿದ್ದಾರೆ.

 

Tags:
error: Content is protected !!