ವಾರ್ಧಾ(ಮಹಾರಾಷ್ಟ್ರ): ಕಾಂಗ್ರೆಸ್ ಪಕ್ಷಕ್ಕೆ ದ್ವೇಷದ ಭೂತ ಹೊಕ್ಕಿದೆ. ಇಂದಿನ ಕಾಂಗ್ರೆಸ್‌ನಲ್ಲಿ ದೇಶಪ್ರೇಮದ ಆತ್ಮ ಕೊನೆಯಿಸಿರೆಳೆದಿದೆ ಎಂದು ಪ್ರಧಾನಿ ಮೋದಿ ದೂರಿದ್ದಾರೆ.
ಪಿಎಂ ವಿಶ್ವಕರ್ಮ ಯೋಜನೆಯೂ ಒಂದು ವರ್ಷ ಪೂರೈಸಿದ ಪ್ರಯುಕ್ತ ಮಹಾರಾಷ್ಟ್ರ ರಾಜ್ಯದ ವಾರ್ಧಾದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತಾಡಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕಾದಲ್ಲಿ ಮೀಸಲಾತಿ ವ್ಯವಸ್ಥೆ ಕುರಿತು ಮಾತನಾಡಿದರ ಬಗ್ಗೆ ಈ ಸಂದರ್ಭದಲ್ಲಿ ಅವರ ಹೆಸರನ್ನು ಉಲ್ಲೇಖಿಸದೇ ಕಿಡಿಕಾರಿದ್ದಾರೆ.
ಗಾಂಧಿ-ನೆಹರೂ ಕುಟುಂಬದ ಹೆಸರು ಹೇಳದೆ, ಕಾಂಗ್ರೆಸ್ ವಿರುದ್ಧ ಗುಡುಗಿರುವ ಮೋದಿ ಭ್ರಷ್ಟ ಪಕ್ಷ ಎಂಬುದು ಇದ್ದರೆ ಅದು ಕಾಂಗ್ರೆಸ್ ಮಾತ್ರ, ರಾಯಲ್ ಪರಿವಾರವೇ ಅತ್ಯಂತ ಭ್ರಷ್ಟ ಕುಟುಂಬವಾಗಿದೆ ಎಂದು ಗುಡುಗಿದ್ದಾರೆ.
ಗಣೇಶ ಪೂಜೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆ. ನಾನು ಗಣೇಶ ಪೂಜೆಗೆ ಹೋಗಿದ್ದನ್ನು ಟೀಕಿಸುತ್ತಿದ್ದಾರೆ. ಇದು ಓಲೈಕೆ ರಾಜಕಾರಣವಾಗಿದೆ. ಕರ್ನಾಟಕದಲ್ಲಿ ಗಣಪತಿಯನು ಕಂಬಿಯ ಹಿಂದಕ್ಕೆ ನೂಕಲಾಗಿದ್ದು, ಪೊಲೀಸ್ ವಾಹನದಲ್ಲಿ ಗಣೇಶ್ ಮೂರ್ತಿಯನ್ನು ತೆಗೆದಕೊಂಡು ಹೋಗಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.