ಹೊಸದಿಲ್ಲಿ : ಗುರುವಾರ (ಜು.12) ಸಂಭವಿಸಿದ ಏರ್ ಇಂಡಿಯಾ ವಿಮಾನ ಪತನದ ತನಿಖೆಗಾಗಿ ಕೇಂದ್ರ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯು ಸೋಮವಾರ(ಜು.16) ಮಧ್ಯಾಹ್ನ ಸಭೆ ಸೇರಲಿದೆ.
ಸಮಿತಿಯು ಮೂರು ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆ ಇದ್ದು, ಗೃಹ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಭವಿಷ್ಯದಲ್ಲಿ ಇಂತಹ ದುರ್ಘಟನೆಗಳ ತಡೆಗಾಗಿ ಕಾರ್ಯಾಚರಣೆ ವಿಧಾನ(ಎಸ್‌ಒಪಿ) ಜಾರಿ ಬಗ್ಗೆ ಸಮಿತಿಯು ಹೆಚ್ಚಿನ ಗಮನ ನೀಡಲಿದೆ ಎನ್ನಲಾಗಿದೆ.





