Mysore
35
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಸಂಸತ್‌ ಕಲಾಪ: ಮಾ.10 ಕ್ಕೆ ಮುಂದೂಡಿಕೆ

ನವದೆಹಲಿ: ಬಜೆಟ್‌ ಅಧಿವೇಶನದ ಮೊದಲ ಹಂತದ ಕಲಾಪ ಶೇ.112ರಷ್ಟು ಫಲಭದ್ರವಾಗಿದ್ದು, ಸದನದ ಕಾರ್ಯಕಲಾಪಗಳನ್ನು ಮಾರ್ಚ್‌ 10ವರೆಗೆ ಮುಂದೂಡಲಾಗಿದೆ ಎಂದು ಸ್ಪೀಕರ್‌ ಓಂ ಬಿರ್ಲಾ ಘೋಷಿಸಿದರು.

ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ, 17 ಗಂಟೆ 23ನಿಮಿಷ ಚರ್ಚೆ ನಡೆದಿದೆ. ಬಜೆಟ್‌ ಮೇಲೆ 170 ಸದಸ್ಯರು ಮಾತನಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಗುಜರಾತ್‌ ಉದ್ಯಮಿಯೊಬ್ಬರಿಗೆ ಯೋಜನೆ ವಹಿಸುವ ಸಂಬಂಧ ವಿರೋಧ ಪಕ್ಷಗಳು ಪ್ರತಿಭಟಿಸಿದ್ದರಿಂದ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿತ್ತು.

ಕಲಾಪ ಆರಂಭವಾಗುತ್ತಿದ್ದಂತೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆದಾಯ ತೆರಿಗೆ ಮಸೂದೆ ಮಂಡಿಸಿದರು.

 

Tags: