Mysore
36
few clouds

Social Media

ಶುಕ್ರವಾರ, 17 ಏಪ್ರಿಲ 2026
Light
Dark

ಅಮೆರಿಕ-ಇರಾನ್ ಎರಡನೇ ಸುತ್ತಿನ ಮಾತುಕತೆಗೆ ಪಾಕಿಸ್ತಾನ ಸಿದ್ಧತೆ

ಇಸ್ಲಾಮಾಬಾದ್ : ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆ ಪಾಕಿಸ್ತಾನದಲ್ಲಿ ನಡೆಯಲಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಸುತ್ತಿನ ಮಾತುಕತೆ ಇಸ್ಲಾಮಾಬಾದ್‌ನಲ್ಲಿ 21 ಗಂಟೆಗಳ ಕಾಲ ನಡೆದರೂ ಒಪ್ಪಂದಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈಗ ಎರಡನೇ ಸುತ್ತಿನ ಸಿದ್ಧತೆಗಳು ಭರದಲ್ಲಿ ಸಾಗುತ್ತಿವೆ.

ಮುಂದಿನ ವಾರವೇ ಎರಡನೇ ಸುತ್ತಿನ ಮಾತುಕತೆ ಇಸ್ಲಾಮಾಬಾದ್‌ನಲ್ಲೇ ನಡೆಯುವ ಸಾಧ್ಯತೆ ಇದೆ. ಪಾಕಿಸ್ತಾನ ಈ ಮಾತುಕತೆಗೆ ಮಧ್ಯಸ್ಥಿಕೆ ವಹಿಸುತ್ತಿದ್ದು, ಇರಾನ್‌ಗೆ ಅಮೆರಿಕದ ಸಂದೇಶವನ್ನು ತಲುಪಿಸಲು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ನೇತೃತ್ವದ ಉನ್ನತ ಮಟ್ಟದ ಪ್ರತಿನಿಧಿ ತಂಡ ಟೆಹ್ರಾನ್‌ಗೆ ಭೇಟಿ ನೀಡಿದೆ.

ವಿಫಲವಾಗಿದ್ದ ಮೊದಲ ಸಭೆ
ಏಪ್ರಿಲ್ 11-12ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ಮಾತುಕತೆಯಲ್ಲಿ ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಸ್ಟೀವ್ ವಿಟ್‌ಕಾಫ್ ಮತ್ತು ಜರೆಡ್ ಕುಷ್ನರ್ ಅವರು ಭಾಗವಹಿಸಿದ್ದರು. ಇರಾನ್ ಪರವಾಗಿ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಗರ್ ಘಲೀಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ನೇತೃತ್ವ ವಹಿಸಿದ್ದರು. 21 ಗಂಟೆಗಳ ಚರ್ಚೆಯ ನಂತರವೂ ಒಪ್ಪಂದ ಆಗಲಿಲ್ಲ.

ಪಾಕಿಸ್ತಾನದ ಪಾತ್ರ
ಪಾಕಿಸ್ತಾನ ಎರಡೂ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಿದ್ದು, ಇದೀಗ ಎರಡನೇ ಸುತ್ತಿನ ಮಾತುಕತೆಗೆ ವೇದಿಕೆ ಸಿದ್ಧಪಡಿಸುತ್ತಿದೆ.

 

Tags:
error: Content is protected !!