ಶ್ರೀನಗರ : ಪಹಲ್ಗಾಮ್ ಭಯೋತ್ಪಾಕ ದಾಳಿಯಲ್ಲಿ ಭಾಗಿಯಾಗಿದ್ದ ಎನ್ನಲಾದ ಭಯೋತ್ಪಾದಕ ಆಸಿಫ್ ಶೇಖ್‌ನ ಮನೆಯನ್ನು ಭಾರತೀಯ ಸೇನೆ ಸ್ಫೋಟಿಸಿದೆ.
ಜಮ್ಮು ಮತ್ತು ಕಾಶ್ಮೀರದ ಟ್ರಾಲ್‌ನಲ್ಲಿದ್ದ ಮನೆಯನ್ನು ಸ್ಪೋಟಿಸಲಾಗಿದೆ ಎಂದು ಪಿಟಿಐ ವಿಡಿಯೊವೊಂದನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಕಾಶ್ಮೀರ್ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22 ರಂದು ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ 26 ಜನರನ್ನು ಕೊಂದಿದ್ದರು. ಆ ಬಳಿಕ, ಭದ್ರತಾ ಪಡೆ ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿದೆ.





