ನವದೆಹಲಿ: ಈ ಬಾರಿಯ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬಂದರೆ ದೆಹಲಿಯ ಕೊಳಗೇರಿಯಲ್ಲಿ ವಾಸಿಸುವ ಜನರಿಗೆ ಕೇವಲ ಐದು ರೂಪಾಯಿಗಳಲ್ಲಿ ಪೌಷ್ಠಿಕಾಂಶ ಭರಿತ ಊಟ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ದೆಹಲಿಯ ಆರ್.ಕೆ. ಪುರಂನಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಬಿಜೆಪಿಯನ್ನು ನೀವುಗಳು ಅಧಿಕಾರಕ್ಕೆ ತಂದರೆ ಯಾವುದೇ ಒಂದು ಕೊಳಗೇರಿಯನ್ನು ಕೆಡುವುದಿಲ್ಲ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ಮೂಲಕ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ನೀಡಿದ್ದ ಹೇಳಿಕೆಗಳನ್ನು ಅಲ್ಲೆಗೆಳೆದಿದ್ದಾರೆ.
ಆಟೋ ಚಾಲಕರು ಮತ್ತು ಮನೆಗೆಲಸದ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಸ್ಥಾಪಿಸಿ, ಅವರಿಗೆ ರೂ. 10 ಲಕ್ಷವರೆಗೆ ವಿಮಾ ರಕ್ಷಣೆ ನೀಡಲಾಗುವುದು. ಮಕ್ಕಳ ಶಾಲಾ ಶುಲ್ಕಕ್ಕೆ ನೆರವು ನೀಡಲಿದೆ. ಎಎಪಿ ಜನರಿಗೆ ಇಲ್ಲಸಲ್ಲದ ಸುಳ್ಳನ್ನು ಹರಡುತ್ತಿದೆ. ಆದರೆ , ದೆಹಲಿಯ ಯಾವುದೇ ಕೊಳಗೇರಿಯನ್ನು ಕೆಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.