ನವದೆಹಲಿ: ಯುಜಿಸಿ-ನೀಟ್ ಹಾಗೂ ಯುಜಿಸಿ-ನೆಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ಎನ್‌ಟಿಎ ಮಂಡಳಿಯ ಮಹಾನಿರ್ದೇಶಕ ಸುಬೋದ್ ಕುಮಾರ್ ಸಿಂಗ್ ಅವರನ್ನು ವಜಾಗೊಳಿಸಿ ಕೇಂದ್ರ ಸರ್ಕಾರ ಶನಿವಾರ(ಜೂ.22) ಆದೇಶಿಸಿದೆ.
ಸುಬೋದ್ ಕುಮಾರ ಅವರನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಲ್ಲಿ ಕಡ್ಡಾಯ ಕಾಯುವಿಕೆಗಾಗಿ ಒಳಪಡಿಸಲಾಗಿದೆ. ಇನ್ನೂ ಪ್ರದೀಪ್ ಸಿಂಗ್ ಖರೋಲಾ ಅವರನ್ನು ಎನ್‌ಟಿಎ ಹೆಚ್ಚುವರಿ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ಖರೋಲ ಅವರು 1985 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಭಾರತೀಯ ವ್ಯಾಪರ ಪ್ರಚಾರದ ಅಧ್ಯಕ್ಷ ಮತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.





