Mysore
26
overcast clouds

Social Media

ಸೋಮವಾರ, 24 ಆಗಸ್ಟ್ 2026
Light
Dark

ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ನಿಖಿಲ್‌ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ

ನವದೆಹಲಿ: ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಬೆಳವಣಿಗೆಗೆ ಮೊದಲ ಆದ್ಯತೆ. ಪಕ್ಷದ ಬೆಳವಣಿಗೆಯಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬ ಕಾರ್ಯಕರ್ತನಿಗೂ ಆತ್ಮ ವಿಶ್ವಾಸ ತುಂಬುವ ನಿಟ್ಟಿನಲ್ಲಿ ನಾನು ಕೂಡ ಅವರ ಹಾಗೇ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಚೌಕಟ್ಟಿನಲ್ಲಿ ಏನೇ ತೀರ್ಮಾನ ಆದರು ಅದನ್ನು ಪಾಲಿಸಲು ಸಿದ್ಧನಿದ್ದೇನೆ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯಾಧ್ಯಕ್ಷ ಹುದ್ದೆ ಆಯ್ಕೆ ಸಂಬಂಧ ದೆಹಲಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಯಾವುದೇ ಹುದ್ದೆಯ ಆಸೆಯಿಲ್ಲ. ನನಗಿಂತ ಹಿರಿಯರಿದ್ದಾರೆ. ತಂದೆಯವರಾದ ಎಚ್‌.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ನಾನು ಪಕ್ಷ ಸಂಘಟನೆ ಕಾರ್ಯ ಮಾಡುತ್ತೇನೆ. ಪಕ್ಷಕ್ಕೆ ಸಾವಿರ ಕಾರ್ಯಕರ್ತರನ್ನು ಹುಟ್ಟುಹಾಕುವ ಶಕ್ತಿ ಇದೆ. ಹೀಗಾಗಿ ಪಕ್ಷದ ತೀರ್ಮಾನವೇ ಅಂತಿಮ ಎಂದರು.

ಉಪಚುನಾವಣೆ ಸೋಲಿನಿಂದ ನಾನು ಹತಾಶನಾಗಿಲ್ಲ. ಈಗಲೂ ನಾನು ಪ್ರತಿನಿಧಿಸಿದ ಕ್ಷೇತ್ರದ ರೈತರ ತಂಬಾಕು ಬೆಳೆಗಳ ಸಮಸ್ಯೆ ನಿವಾರಿಸಲು ದೆಹಲಿಗೆ ಬಂದಿದ್ದೇನೆ. ಈ ಕುರಿತು ಗೃಹ ಸಚಿವ ಅಮಿತ್‌ ಶಾ, ಉಸ್ತುವಾರಿ ರಾಧಾ ಮೋಹನ್‌ ದಾಸ್, ಸಂಘಟನಾ‌ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಭೇಟಿ ಮಾಡಿ ರಾಜ್ಯದಲ್ಲಿ ಮೈತ್ರಿ ಬಲಪಡಿಸುವ ಬಗ್ಗೆ, ಸ್ಥಳೀಯ ಚುನಾವಣೆ ಒಟ್ಟಾಗಿ ಎದುರಿಸುವ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು.

ಇನ್ನು ಹಾಸನದಲ್ಲಿ ಕಾಂಗ್ರೆಸ್‌ ಜನಕಲ್ಯಾಣ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಸಮಾವೇಶದಿಂದ ಜನರಿಗೆ ಏನಾದರು ಉಪಯೋಗವಾಗಿದೇಯೋ? ಅವರು ಮಾಡಿರುವ ಹಗರಣಗಳನ್ನು ಮುಚ್ಚಿಹಾಕಲು ಇಂತದ ಸಮಾವೇಶ ಮಾಡಿ ಜನರ ತೆರಿಗೆ ದುಡ್ಡನ್ನು ಪೋಲು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಮಾವೇಶದಿಂದ ಎಚ್‌.ಡಿ.ದೇವೇಗೌಡರ ಕುಟುಂಬ ನಿಂದಿಸಿ ರಾಜಕೀಯವಾಗಿ ದುರ್ಬಲ ಮಾಡಲು ಹೊರಟಿದ್ದಾರೆ. ಇದರಿಂದ ನಾವು ಎದೆಗುಂದುವುದಿಲ್ಲ. ಮಂಡ್ಯದಲ್ಲಿ ನಾವು ಪಕ್ಷ ಸಂಘಟನೆ ಮತ್ತು ಜನರನ್ನು ಒಗ್ಗೂಡಿಸುವುದಕ್ಕಾಗಿ ಸಮಾವೇಶ ಮಾಡಬೇಕಾಯಿತು. ಆದರೆ ಕುಮಾರಸ್ವಾಮಿಯವರು ಸಂಸತ್‌ನ ಅಧಿವೇಶನದಲ್ಲಿ ಬ್ಯುಸಿಯಾಗಿರುವುದರಿಂದ ಸಮಾವೇಶವನ್ನು ಮುಂದೂಡಿಕೆ ಮಾಡಲಾಗಿದೆ ಎಂದರು.

ಉಪಚುನಾವಣೆಯಲ್ಲಿ 87,000 ಸಾವಿರ ಮತಗಳನ್ನು ಪಡೆದು ಸೋತಿದ್ದೇನೆ. ಇದು ಸೋಲಲ್ಲ. ಜನತೆ ಕ್ಷೇತ್ರದ ನಾಡಿಮಿಡಿತ ಅರಿಯಲು ನೀಡಿರುವ ಮತ್ತೊಂದು ಅವಕಾಶ ಎಂದು ಹೇಳಿದರು.

 

Tags:
error: Content is protected !!