Mysore
18
broken clouds

Social Media

ಮಂಗಳವಾರ, 14 ಜನವರಿ 2025
Light
Dark

ಜನತೆಗೆ ಮತ್ತೊಂದು ಶಾಕ್:‌ ಅತಿ ವೇಗವಾಗಿ ಹರಡುವ ಕೋವಿಡ್‌ ಹೊಸ ತಳಿ ಪತ್ತೆ

ನವದೆಹಲಿ: ಕಳೆದ 2020ರಲ್ಲಿ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದುಕೊಂಡಿದ್ದ ಕೊರೊನಾ ವೈರಸ್‌ ಇದೀಗ ಮತ್ತೆ ಹೊಸ ರೂಪ ಪಡೆದುಕೊಂಡಿದೆ.

ಎಕ್ಸ್‌ಇಸಿ ಎಂಬ ಹೆಸರಿನ ಕೋವಿಡ್‌ ರೂಪಾಂತರಿ ತಳಿ ಯುರೋಪ್‌ ದೇಶಗಳಲ್ಲಿ ಪತ್ತೆಯಾಗಿದ್ದು, ಇದರಿಂದ ಸುಮಾರು 27 ದೇಶಗಳಿಗೆ ತೀವ್ರ ಆತಂಕ ಹುಟ್ಟಿಸಿದೆ.

ಈ ಬೆನ್ನಲ್ಲೇ ಈ ವೈರಸ್‌ ಅತ್ಯಂತ ವೇಗವಾಗಿ ಹರಡುತ್ತದೆ ಎಂದು ವಿಜ್ಞಾನಿಗಳು ಖಡಕ್‌ ಎಚ್ಚರಿಕೆ ನೀಡಿದ್ದು, ಜನತೆಯಲ್ಲಿ ಆತಂಕ ಮನೆಮಾಡಿದೆ.

ಓಮಿಕ್ರಾನ್‌ ಉಪತಳಿಯಾಗಿರುವ ಎಕ್ಸ್‌ಇಸಿ ರೂಪಾಂತರವನ್ನು ಕಳೆದ ಜೂನ್‌ನಲ್ಲಿ ಜರ್ಮನಿಯಲ್ಲಿ ಗುರುತಿಸಲಾಗಿದೆ.

ಬಳಿಕ ಈ ರೂಪಾಂತರಿ ವೈರಸ್‌ ಯುಕೆ, ಯುಎಸ್‌, ಉಕ್ರೇನ್‌, ಪೋಲೆಂಡ್‌, ನಾರ್ವೆ ಸೇರಿದಂತೆ ಸುಮಾರು 27 ದೇಶಗಳಲ್ಲಿ 500 ಮಾದರಿಗಳು ಕಾಣಿಸಿಕೊಂಡಿದೆ.

ಈ ವೈರಸ್‌ ಅತ್ಯಂತ ಬೇಗ ಹರಡಲಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆದುಕೊಳ್ಳದ ಜನರು ಬೇಗ ಲಸಿಕೆ ತೆಗೆದುಕೊಳ್ಳುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.

 

Tags: