Mysore
36
few clouds

Social Media

ಸೋಮವಾರ, 13 ಏಪ್ರಿಲ 2026
Light
Dark

ನೆತನ್ಯಾಹು 1 ಫೋನ್‌ ಕಾಲ್‌ ಎಲ್ಲವನ್ನೂ ಹಾಳು ಮಾಡಿತು: ಇರಾನ್‌ ಹೊಸ ಬಾಂಬ್‌

ಟೆಹರಾನ್:‌ ಇಸ್ಲಾಮಾಬಾದ್‌ನಲ್ಲಿ ನಡೆದ 21 ಗಂಟೆಗಳ ಮಾತುಕತೆ ವಿಫಲವಾದ ಬೆನ್ನಲ್ಲೇ ಇರಾನ್‌ ಮೊದಲ ಪ್ರತಿಕ್ರಿಯೆ ನೀಡಿದ್ದು, ಮಾತುಕತೆ ವಿಫಲವಾಗಲು ಇಸ್ರೇಲ್‌ ಪ್ರಧಾನಿಯೇ ನೇರ ಕಾರಣ ಎಂದು ಹೊಸ ಬಾಂಬ್‌ ಸಿಡಿಸಿದೆ.

ಈ ಕುರಿತು ಇರಾನ್‌ ವಿದೇಶಾಂಗ ಸಚಿವ ಸಯ್ಯದ್‌ ಅಬ್ಬಾಸ್‌ ಆರಾಘ್ವಿ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಅಮೇರಿಕಾ-ಇರಾನ್‌ ಮಾತುಕತೆಗಳ ಮಧ್ಯೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಅಮೇರಿಕಾ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ಗೆ ಫೋನ್‌ ಕಾಲ್‌ ಮಾಡಿದ್ದರು. ಆ ಫೋನ್‌ ಕಾಲ್‌ ಬಳಿಕ ಮಾತುಕತೆ ಎಲ್ಲಾ ಹಳಿತಪ್ಪಿತು. ಅಮೇರಿಕಾ ಬಿಕ್ಕಟ್ಟಿನಲ್ಲಿ ಕಾಣುತ್ತಿದ್ದ ಪ್ರಗತಿಯನ್ನು ಹಾಳುಮಾಡಿತು ಎಂದು ಕಿಡಿಕಾರಿದ್ದಾರೆ.

ಇರಾನ್‌ ತನ್ನ ರಾಷ್ಟ್ರದ ಹಿತಾಸಕ್ತಿ ಮತ್ತು ಸಾರ್ವಭೌಮತ್ವವನ್ನು ಕಾಪಾಡಲು ಸಿದ್ಧ ಮತ್ತು ಬದ್ಧವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

Tags:
error: Content is protected !!