ಕಠ್ಮಂಡು: ನೇಪಾಳದ ಕಠ್ಮುಂಡುವಿನಲ್ಲಿ ಶೌರ್ಯ ವಿಮಾನವೊಂದು ಟೇಕಾಫ್ ಆಗುವ ವೇಳೆಯೇ ಪತನವಾಗಿದ್ದು, 19 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.
ನೇಪಾಳದ ಕಠ್ಮುಂಡುವಿನಲ್ಲಿ ಟೇಕ್ ಆಫ್ ಆಗುವ ವೇಳೆಯೇ 19 ಪ್ರಯಾಣಿಕರಿದ್ದ ಶೌರ್ಯ ವಿಮಾನ ಪತನಗೊಂಡಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಮಾಹಿತಿ ಪ್ರಕಾರ ಸೂರ್ಯ ಏರ್‌ಲೈನ್ಸ್ ವಿಮಾನವು ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೊಖರಾಗೆ ಹಾರುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ವಿಮಾನದಲ್ಲಿ ಸಾಮಾನ್ಯ ಪ್ರಯಾಣಿಕರು ಇರಲಿಲ್ಲ. ಆದರೆ ತಾಂತ್ರಿಕ ತಂಡದ 19 ಸದಸ್ಯರು ಇದ್ದರು. 19 ಮಂದಿಯೂ ಸಜೀವ ದಹನವಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.
ವಿಮಾನ ಪತನದ ನಂತರ ಹೊಗೆ ಬಂದಿದ್ದು, ಪರಿಸ್ಥಿತಿ ನಿಯಂತ್ರಿಸಲು ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.