Mysore
21
overcast clouds
Light
Dark

ನೀಟ್‌ ಅಕ್ರಮ: NSUI ವತಿಯಿಂದ ಎನ್‌ಟಿಎ ವಿರುದ್ಧ ಪ್ರತಿಭಟನೆ

ನವದೆಹಲಿ: ನೀಟ್-ಯುಜಿ ಹಾಗೂ ಯುಜಿಸಿ-ನೆಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮವನ್ನು ಖಂಡಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(ಎನ್‌ಎಸ್‌ಯುಐ)ಸದಸ್ಯರು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ವಿರುದ್ಧ ಪ್ರತಿಭಟನೆ ನಡೆಸಿದರು.

ಇಂದು(ಜೂ.27) ನವದೆಹಲಿಯ ಒಖ್ಲಾದಲ್ಲಿರುವ ಎನ್‌ಟಿಎ ಕಚೇರಿಗೆ ನುಗ್ಗಿದ ಎನ್‌ಎಸ್‌ಯುಐ ಪ್ರತಿಭಟನಾಕಾರರು ಎನ್‌ಟಿಎ ಕಚೇರಿಯನ್ನು ಮುಚ್ಚಿ ಘೋಷಣೆಗಳನ್ನು ಕೂಗಿದ್ದಾರೆ. ಇನ್ನೂ ಈ ಕುರಿತು ಎನ್‌ಟಿಎ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದೇಶದಾದ್ಯಂತ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವೈಧ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನೀಟ್-ಯುಜಿ ಹಾಗೂ ಜೆಆರ್‌ಎಫ್‌, ಪ್ರಾಧ್ಯಾಪಕರ ಆಯ್ಕೆಯೆ ಯುಜಿಸಿ-ನೆಟ್‌ ಪರೀಕ್ಷೆಯನ್ನು ಎನ್‌ಟಿಎ ಸಂಸ್ಥೆ ನಡೆಸುತ್ತದೆ.

ಮೇ 5ರಂದು ನಡೆದ ಯುಜಿ-ನೀಟ್‌ ಹಾಗೂ ಜೂನ್‌ 18 ರಂದು ನಡೆದು ಯುಜಿಸಿ-ನೆಟ್‌ಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಇವೆ. ಈ ಸಂಬಂಧ ದೇಶದಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಪ್ರಕರಣವನ್ನು ಸಿಬಿಐಗೆ ವಹಿಸಿದ ಕೇಂದ್ರ, ಮರುದಿನವೇ ಮೊದಲ ದೂರು ದಾಖಲಿಸಿಕೊಂಡು ತನಿಖೆ ನಡೆಸಿ, ಇಂದು ಬಿಹಾರದ ಪಾಟ್ನಾದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.