Mysore
21
overcast clouds

Social Media

ಶನಿವಾರ, 15 ಆಗಸ್ಟ್ 2026
Light
Dark

ಮೋದಿ ನಿವಾಸದಲ್ಲಿ ಎನ್‌ಡಿಎ ನಾಯಕರಿಗೆ ಚಹಾಕೂಟ: ಸಂಭವನೀಯ ಪಟ್ಟಿ ಪ್ರಕಟ!

ನವದೆಹಲಿ: ಇಂದು (ಜೂನ್‌.9) ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುತ್ತಿರುವ ಬೆನ್ನಲ್ಲೇ ತಮ್ಮ ನಿವಾಸದಲ್ಲಿಂದು ಎನ್‌ಡಿಎ ನಾಯಕರಿಗೆ ಚಹಾಕೂಟ ಆಯೋಜಿಸಿದ್ದರು.

ಈ ಕಾರ್ಯಕ್ರಮದಲ್ಲಿ ವಿ.ಸೋಮಣ್ಣ, ಅಮಿತ್‌ ಶಾ, ಜೆಪಿ ನಡ್ಡಾ ಸೇರಿದಂತೆ ಗಣ್ಯರು ಸೇರಿದಂತೆ ಎಲ್ಲರೂ ಪಾಲ್ಗೊಂಡಿದ್ದರು.

ಇನ್ನು ಇಂದು ಮೋದಿ ಪ್ರಮಾಣವಚನ ಸ್ವೀಕರಿಸುವ ಜತೆಗೆ ಎಚ್‌.ಡಿ ಕುಮಾರಸ್ವಾಮಿ, ನಿತಿನ್‌ ಗಡ್ಕರಿ, ರಾಜನಾಥ್‌ ಸಿಂಗ್‌, ಪಿಯೂಷ್‌ ಗೋಯಲ್‌, ಸೋಮಣ್ಣ ಸೇರಿದಂತೆ ಇತರ ನಾಯಕರಿಗೆ ಇಂದು ಸ್ಥಾನ ಪಡೆಯುವ ಸಾಧ್ಯತೆಯಿದೆ.

ಇನ್ನು ಚಹಾಕೂಟದಲ್ಲಿ ಸಂಸದರನ್ನುದ್ದೇಶಿಸಿ ಮಾತನಾಡಿದ ಅವರು, 2047 ವರೆಗೆ ಭಾರತ ವಿಕಸಿತ ಕನಸು ನನಸು ಆಗಬೇಕು. ಬಾಕಿ ಇರುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಎನ್‌ಡಿಎ ಮೇಲೆ ಜರಿಗೆ ಅಸ್ಥಿತ್ವ ಉಳಿದಿರುವುದು ಜನರಿಗೆ ನಮ್ಮ ಮೇಲೆ ನಂಬಿಕೆ ಬಂದಿದೆ ಎಂದು ಅವರು ಹೇಳಿದರು.

ಸಂಭವನೀಯ ಸಚಿವರ ಪಟ್ಟಿ ಇದು:

ನಿತಿನ್‌ ಗಡ್ಕರಿ
ರಾಜನಾಥ್‌ ಸಿಂಗ್‌
ಪಿಯೂಷ್‌ ಗೋಯಲ್‌
ಜ್ಯೋತಿರಾಧಿತ್ಯ ಸಿಂಧಿಯಾ
ಕಿರಣ್‌ ರಿಜಿಜು
ಎಚ್‌.ಡಿ ಕುಮಾರಸ್ವಾಮಿ
ಚಿರಾಗ್‌ ಪಾಸ್ವಾನ್‌
ರಾಮ್‌ನಾಥ್‌ ಠಾಕೂರ್‌
ಜಿತಿನ್‌ ರಾಮ್‌ ಮಾಂಝಿ
ಜಯಂತ್‌ ಚೌಧರಿ
ಅನುಪ್ರಿಯ ಪಾಟೀಲ್‌
ರಾಮ್‌ಮೋಹನ್‌ ಪಾಟೀಲ್‌
ರಾಮ್‌ಮೋಹನ್‌ ನಾಯ್ಡು
ಚಂದ್ರಶೇಖರ್‌ ಪೆಮ್ಮಾಸಾನಿ
ಪ್ರತಾಪ್‌ ರಾವ್‌ ಜಾಧವ್‌
ಸರ್ಬಾನಂದ್ ಸೊನೊವಾಲ್‌
ಜೆಪಿ ನಡ್ಡಾ
ಶ್ರೀನಿವಾಸ ವರ್ಮಾ
ರವನೀತ್‌ ಸಿಂಗ್‌ ಬಿಟ್ಟು
ವಿ. ಸೋಮಣ್ಣ

Tags:
error: Content is protected !!