ಬಿಹಾರ : ನಳಂದ ಕೇವಲ ಒಂದು ಹೆಸರಲ್ಲ ಅದೊಂದು ಅಸ್ಮಿತೆ ಎಂದು ಪ್ರಧನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಹಾರದ ರಾಜ್‌ಗಿರ್‌ನಲ್ಲಿ ನೂತನವಾಗಿ ನಿರ್ಮಿಸಿರುವ ನಳಂದ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಫಲಕವನ್ನು ಅನಾವರಣ ಮಾಡಿ ಸಸಿ ನೆಡುವ ಮೂಲಕ ಇಂದು ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದಾರೆ. ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಮೂರನೇ ಬಾರಿ ಪ್ರಧಾನಿಯಾದ ಬಳಿಕ ನಳಂದಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದರು.
ನಳಂದ ಕೇವಲ ಒಂದು ಹೆಸರಲ್ಲ ಅದೊಂದು ಅಸ್ಮಿತೆ ಮತ್ತು ಗೌರವ. ನಳಂದ ಒಂದು ಮೌಲ್ಯ ಮತ್ತು ಮಂತ್ರ. ಬೆಂಕಿ ಪುಸ್ತಕವನ್ನು ಸುಡಬಹುದೆ ಹೊರತು ಜ್ಞಾನವನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದರು. ಇದೇ ಸಂದರ್ಭದಲ್ಲಿ ೧೭ದೇಶಗಳ ರಾಯಭಾರಿಗಳು ಕಾರ್ಯಕ್ರಮದಲ್ಲಿ ಭಾಗವಿಸುವ ಮೂಲಕ ವಿಶೇಷ ಕ್ಷಣಕ್ಕೆ ಸಾಕ್ಷಿಯಾದರು.
ಈ ವೇಳೆ ವಿದೇಶಾಂಗ ಸಚಿವ ಎಸ್.ಜೈಶಂಕರ್, ಬಿಹಾರದ ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್, ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಹಾಗೂ ವಿಜಯ್ ಸನ್ಹಾ ಉಪಸ್ಥಿತರಿದ್ದರು.