Mysore
26
clear sky

Social Media

ಶನಿವಾರ, 18 ಏಪ್ರಿಲ 2026
Light
Dark

ಮುಂಬೈ ದಾಳಿಯ ಸಂಚುಕೋರ ರಾಣಾ ಇಂಡಿಯಾಗೆ

ನವದೆಹಲಿ: ಮುಂಬೈ ದಾಳಿಯ ಸಂಚುಕೋರ ತಹವ್ವೂರ್‌ ರಾಣಾನನ್ನು ಭಾರತಕ್ಕೆ ವಿಶೇಷ ವಿಮಾನದ ಮೂಲಕ ಕರೆತರಲಾಗಿದೆ.

ರಾಣಾ ಇದ್ದ ವಿಶೇಷ ವಿಮಾನ ಗುರುವಾರ ಮಧ್ಯಾಹ್ನ 3 ಗಂಟೆಗೆ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗಿದೆ. ಎನ್‌ಐಎ ಬಂಧನ ಪ್ರಕ್ರಿಯೆ ಮುಗಿಸಿದ್ದು, ಸ್ಥಳದಲ್ಲಿ ಭಾರಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಭಾರತಕ್ಕೆ ಗಡಿಪಾರಾಗಿರುವುದರಿಂದ ತಪ್ಪಿಸಿಕೊಳ್ಳಲು ರಾಣಾ ಅಮೇರಿಕಾದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಆತನ ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿತ್ತು. ಗಡೀಪಾರಿನಿಂದ ತಪ್ಪಿಸಿಕೊಳ್ಳುವ ರಾಣಾನ ಕೊನೆಯ ಪ್ರಯತ್ನವೂ ವಿಫಲವಾಗಿದ್ದು, ಇಂದು ಭಾರತಕ್ಕೆ ಕರೆತರಲಾಗಿದೆ.

ಲಾಸ್‌ ಏಂಜಲೀಸ್‌ನ ಮೆಟ್ರೋಪಾಲಿಟನ್‌ ಜೈಲಿನಲ್ಲಿದ್ದ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ರಾಣಾ (64)ನನ್ನು ಭಾರತದ ಬಹು ಏಜೆನ್ಸಿ ತಂಡವು ಭಾರತಕ್ಕೆ ಕರೆತರಲು ಪ್ರಕ್ರಿಯೆ ನಡೆಸಿತು.

ರಾಣಾ 2008ರ ಮುಂಬೈ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಅಮೇರಿಕನ್‌ ಪ್ರಜೆ ಡೇವಿಡ್‌ ಕೊಲಮನ್‌ ಹೆಡ್ಲಿ ಅಲಿಯಾಸ್‌ ದಾವೂದ್‌ ಗಿಲಾನಿಯ ನಿಕಟ ಸಹಚರನಾಗಿದ್ದ.

Tags:
error: Content is protected !!