Mysore
22
overcast clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಹಣ ವಂಚನೆ: ನಕಲಿ ನೋಟಿನಲ್ಲಿ ನಟ ಅನುಪಮ್‌ ಖೇರ್‌ ಫೋಟೋ

ಮೈಸೂರು: ಗುಜರಾತ್‌ನ ಚಿನ್ನಾಭರಣ ವ್ಯಾಪಾರಸ್ಥರೊಬ್ಬರಿಗೆ ವಂಚಕರು 500 ರೂ. ಮುಖಬೆಲೆಯ 1.3ಕೋಟಿ ರೂ.ಮೌಲ್ಯದ ನಕಲಿ ನೋಟುಗಳನ್ನು ನೀಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಈ ವಂಚನೆ ಪ್ರಕರಣದ ಪ್ರಮುಖ ವಿಶೇಷವೆಂದರೆ ವ್ಯಾಪಾರಸ್ಥರಿಗೆ ವಂಚಕರು ನೀಡಿದ್ದ 500 ರೂ. ಮುಖಬೆಲೆಯ 1.3ಕೋಟಿ ಮೌಲ್ಯದ ನಕಲಿ ನೋಟುಗಳಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರವಿರದೇ ಬಾಲಿವುಡ್‌ ನಟ ಅನುಪಮ್‌ ಖೇರ್‌ ಅವರ ಚಿತ್ರವಿದೆ. ಸದ್ಯ, ಈ ನೋಟುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಚಿನ್ನಾಭರಣ ವ್ಯಾಪಾರಸ್ಥರ ಹತ್ತಿರ 2 ಕೆ.ಜಿ.ಚಿನ್ನ ಖರೀದಿ ಒಪ್ಪಂದ ಮಾಡಿಕೊಂಡಿದ್ದ ವಂಚಕರು 1.3 ಕೋಟಿ ರೂ. ನಗದು ಹಣ ಇದೆ ಎಂದು ಹೇಳಿ ಹಣದ ಬ್ಯಾಗ್‌ನ್ನು ನೀಡಲು ಬಂದಿದ್ದರು. ಆದರೆ ವಂಚಕರು ನಕಲಿ ನೋಟುಗಳ ಜೊತೆಗೆ ಅನೇಕ ಅಸಲಿ ನೋಟುಗಳನ್ನು ಮೇಲ್ಭಾಗ ತೋರಿಕೆಗಾಗಿ ಇಟ್ಟಿದ್ದರು. ಇದೇ ವೇಳೆಗೆ ವ್ಯಾಪಾರಸ್ಥರ ನಂಬಿಕೆಗಳಿಸಿದ್ದ ವಂಚಕರು ಇನ್ನೊಂದು ಅಂಗಡಿ ಹತ್ತಿರ ಚಿನ್ನ ಖರೀದಿಸಬೇಕಿದೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಬ್ಯಾಗ್‌ನಲ್ಲಿದ್ದ ಹಣವನ್ನು ತಕ್ಷಣವೇ ಯಂತ್ರದ ಸಹಾಯದಿಂದ ಎಣಿಸಲು ಹೋದಾಗ ನೋಟಿನಲ್ಲಿ ಗಾಂಧೀಜಿ ಬದಲು ಅನುಪಮ್‌ ಖೇರ್‌ ಮುಖಬೆಲೆಯ ನೋಟುಗಳನ್ನು ಇಡಲಾಗಿದೆ ಎಂಬ ಅಸಲಿ ಸತ್ಯ ಗೊತ್ತಾಗಿ ಆಶ್ಚರ್ಯಗೊಂಡ ವ್ಯಾಪಾರಸ್ಥನು, ನವರಂಗ್‌ಪುರ ಪೊಲೀಸ್‌ ಠಾಣೆಗೆ ವಂಚಕರ ವಿರುದ್ಧ ದೂರು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ವಂಚಕರ ವಿರುದ್ಧ ದೂರು ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದೇನೆ ಎಂದು ಹೇಳಿದ್ದಾರೆ.

Tags:
error: Content is protected !!