Mysore
18
overcast clouds

Social Media

ಗುರುವಾರ, 08 ಜನವರಿ 2026
Light
Dark

ಸರ್‌ ನಿಮ್ಮನ್ನು ಭೇಟಿಯಾಗಬಹುದೇ ಎಂದು ಮೋದಿ ಕೇಳಿದ್ದಾರೆ : ಟ್ರಂಪ್‌

ವಾಷಿಂಗ್ಟನ್ : ದೀರ್ಘಕಾಲದಿಂದ ಬಾಕಿ ಉಳಿದಿರುವ ರಕ್ಷಣಾ ಖರೀದಿ ಮಾತುಕತೆ ಹಾಗೂ ವಾಣಿಜ್ಯ ವ್ಯವಹಾರಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಸಂಪರ್ಕಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.

ರಿಪಬ್ಲಿಕನ್ ಪಕ್ಷದ ಸಂಸದರ ಸಭೆಯಲ್ಲಿ ಮಾತನಾಡಿರುವ ಟ್ರಂಪ್, ಅಪಾಚೆ ಹೆಲಿಕಾಪ್ಟರ್ ಖರೀದಿಗೆ ಬೇಡಿಕೆ ಇಟ್ಟಿರುವ ಭಾರತ, ಅವನ್ನು ಐದು ವರ್ಷಗಳಿಂದ ಪಡೆದುಕೊಳ್ಳಲು ಆಗಿಲ್ಲ. ಪ್ರಧಾನಿ ಮೋದಿ ನನ್ನನ್ನು ಭೇಟಿಯಾಗಲು ಬಂದಿದ್ದರು. ಸರ್, ನಿಮ್ಮನ್ನು ಭೇಟಿಯಾಗಬಹುದೇ ಎಂದು ಕೇಳಿದ್ದರು ಎಂದಿದ್ದಾರೆ. ಹಾಗೆಯೇ, ಮೋದಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾದ ಷಿ ಜಿನ್ ಪಿಂಗ್ ಹೊರತುಪಡಿಸಿ ಜಗತ್ತಿನ ಉಳಿದ ಎಲ್ಲ ನಾಯಕರೂ ನನ್ನನ್ನು ಸರ್ ಎಂದೇ ಸಂಬೋಧಿಸುತ್ತಾರೆ ಎಂದೂ ಹೇಳಿಕೊಂಡಿದ್ದಾರೆ.

ಭಾರತವು ಸಾಕಷ್ಟು ಸುಂಕ ಪಾವತಿಸಬೇಕಾಗಿರುವುದರಿಂದ ಮೋದಿ ಅಸಮಾಧಾನಗೊಂಡಿದ್ದಾರೆ. ಆದರೆ, ರಷ್ಯಾದೊಂದಿಗೆ ತೈಲ ವ್ಯವಹಾರ ಮಾಡುತ್ತಿರುವ ಕಾರಣದಿಂದಾಗಿ ಅವರ ಮೇಲೆ ಸುಂಕ ಹೇರಿದ್ದೇವೆ ಎಂದು ಸಮರ್ಥಿಸಿಕೊಂಡಿರುವ ಟ್ರಂಪ್, ರಷ್ಯಾದಿಂದ ತೈಲ ಖರೀದಿಸುವುದನ್ನು ಭಾರತ, ಸ್ವಲ್ಪ ಮಟ್ಟಿಗೆ ತಗ್ಗಿಸಿದೆ ಎಂದು ಪ್ರತಿಪಾದಿಸಿದ್ದಾರೆ.

 

 

Tags:
error: Content is protected !!