Mysore
30
scattered clouds

Social Media

ಶನಿವಾರ, 21 ಮಾರ್ಚ್ 2026
Light
Dark

62ನೇ ವಯಸ್ಸಲ್ಲಿ ಮದುವೆ : ಅಧಿಕಾರದಲ್ಲಿರುವಾಗಲೇ ಮದುವೆಯಾಗಿ ದಾಖಲೆ ಬರೆದ ಆಸಿಸ್‌ ಪ್ರಧಾನಿ

ಹೊಸದಿಲ್ಲಿ : ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಇಂದು ಕ್ಯಾನ್‌ಬೆರಾದ ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ತಮ್ಮ ಪ್ರೇಯಸಿ ಜೋಡಿ ಹೇಡನ್ ಅವರನ್ನು ವಿವಾಹವಾಗಿದ್ದಾರೆ.

124 ವರ್ಷಗಳ ಆಸ್ಟ್ರೇಲಿಯಾದ ಫೆಡರಲ್ ಸರ್ಕಾರದ ಇತಿಹಾಸದಲ್ಲಿ ಅಧಿಕಾರದಲ್ಲಿದ್ದಾಗ ಮದುವೆಯಾದ ಮೊದಲ ಆಸ್ಟ್ರೇಲಿಯಾದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಆಲ್ಬನೀಸ್ ಪಾತ್ರರಾಗಿದ್ದಾರೆ.

ಇದನ್ನೂ ಓದಿ:-ಕ್ಯಾಬ್ ದರೋಡೆ : ಮೈಸೂರಿನ 6 ಮಂದಿ ಸೇರಿ 8 ಮಂದಿ ಬಂಧನ

62 ವರ್ಷದ ಪ್ರಧಾನಿ ಆಲ್ಬನೀಸ್ ಅವರು ತಮ್ಮ ಧೀರ್ಘಕಾಲದ ಗೆಳತಿ ಜೊಡಿ ಹೇಡನ್‌ ಅವರನ್ನು ಇಂದು ಮಧ್ಯಾಹ್ನ ನಡೆದ ಸಮಾರಂಭದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾದರು. ಆಲ್ಬನೀಸ್‌ ಅವರಿಗೆ ಇದು ಎರಡನೇ ಮದುವೆ. ಈ ಮದುವೆಯಲ್ಲಿ ಸುಮಾರು 60 ಅತಿಥಿಗಳು ಮಾತ್ರ ಈ ಸಮಾರಂಭದಲ್ಲಿ ಹಾಜರಿದ್ದರು. ಇದರಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ನಟ ರಸೆಲ್ ಕ್ರೋವ್ ಮತ್ತು ಹಲವಾರು ಕ್ಯಾಬಿನೆಟ್ ಮಂತ್ರಿಗಳು ಕೂಡ ಸೇರಿದ್ದಾರೆ. ಈ ಸಮಾರಂಭವು ಖಾಸಗಿಯಾಗಿದ್ದರಿಂದ ಯಾವುದೇ ಮಾಧ್ಯಮಗಳಿಗೂ ಒಳಗೆ ಪ್ರವೇಶಿಸಲು ಅನುಮತಿ ಇರಲಿಲ್ಲ.

ನಮ್ಮ ಕುಟುಂಬ ಮತ್ತು ಹತ್ತಿರದ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಮುಂದಿನ ಜೀವನವನ್ನು ಒಟ್ಟಿಗೆ ಕಳೆಯಲು ನಮ್ಮ ಪ್ರೀತಿ ಮತ್ತು ಬದ್ಧತೆಯನ್ನು ಹಂಚಿಕೊಳ್ಳಲು ವಿವಾಹವಾಗಿದ್ದೇವೆ. ಈ ಮಾಹಿತಿಯನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ ಎಂದು ಆಸ್ಟ್ರೇಲಿಯನ್ ಪ್ರಧಾನಿ ತಿಳಿಸಿದ್ದಾರೆ.

Tags:
error: Content is protected !!