ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ನಿವಾಸದಲ್ಲಿ ಕಾಲು ಜಾರಿ ಬಿದ್ದಿದ್ದು ಹಣೆ ಭಾಗಕ್ಕೆ ಗಂಭೀರ ಗಾಯವಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಟಿಎಂಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು, “ನಮ್ಮ ನಾಯಕಿ ಮಮತಾ ಅವರಿಗೆ ಗಂಭೀರವಾದ ಗಾಯವಾಗಿದೆ. ಅವರಿಗಾಗಿ ನೀವೆಲ್ಲಾ ಪ್ರಾರ್ಥಿಸಿ” ಎಂದು ಬರೆದುಕೊಂಡಿದೆ.
ಮಮತಾ ಬ್ಯಾನರ್ಜಿ ಹಣೆಗೆ ತೀವ್ರ ಪೆಟ್ಟಾಗಿ ಹಣೆಯಿಂದ ಮುಖದ ಮೇಲೆ ರಕ್ತ ಹರಿಯತ್ತಿದ್ದು, ಆಸ್ಪತ್ರೆ ಹಾಸಿಗೆ ಮೇಲೆ ಮಲಗಿರುವ ಫೋಟೊ ಎಲ್ಲೆಡೆ ವೈರಲ್ ಆಗಿದೆ.
ಇನ್ನು ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊ ಮೇಲೆ ಟ್ರೋಲ್ ಸಹ ಹರಿದಾಡಿವೆ. ಚುನಾವಣೆ ಸಮೀಪಿಸುತ್ತಿದ್ದಂತೆ ದೀದಿ ಡ್ರಾಮಾ ಶುರು ಎಂದು ಕಾಲೆಳೆದಿದ್ದಾರೆ.





