Mysore
22
overcast clouds
Light
Dark

ಮಧ್ಯಪ್ರದೇಶ: ದಲಿತ ದಂಪತಿ ಮೇಲೆ ಹಲ್ಲೆ ಮಾಡಿ ಶೂ ಹಾರ ಹಾಕಿದ ದುಷ್ಕರ್ಮಿಗಳು

ಮಧ್ಯಪ್ರದೇಶ: ಹೆಂಡತಿಯನ್ನು ಚುಡಾಯಿಸಿದ ಎಂದು ಆರೋಪಿಸಿ ವೃದ್ಧ ದಲಿತ ದಂಪತಿಗಳ ಮೇಲೆ ಹಲ್ಲೆ ಮಾಡಿ, ಶೂಗಳ ಹಾರ ಹಾಕಿಸಿರುವ ಘಟನೆ ಮಧ್ಯಪ್ರದೇಶದ ಅಶೋಕನಗರದಲ್ಲಿ ನಡೆದಿದೆ.

ಮುಂಗೌಲಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕಿಲೋರಾ ಹಳ್ಳಿಯಲ್ಲಿ ಶನಿವಾರ ಸಂಜೆ(ಮೇ.18) ಈ ಘಟನೆ ನಡೆದಿದ್ದು, ಈ ಬಗ್ಗೆ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೃದ್ದ ದಂಪತಿಯ ಮಗ ಆರೋಪಿಗಳಲ್ಲಿ ಒಬ್ಬನ ಹೆಂಡತಿಯನ್ನು ಚುಡಾಯಿಸಿದ್ದಾನೆ ಎಂದು ಆರೋಪಿಸಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, 65 ವರ್ಷದ ದಲಿತ ವ್ಯಕ್ತಿ ಮತ್ತು ಆತನ ಹೆಂಡತಿ 60 ವರ್ಷದ ಪತ್ನಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಘಟನೆ ಬಳಿಕ ದಲಿತ ಕುಟುಂಬ ಊರು ತೊರೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಶನಿವಾರ(ಮೇ.18) ೧೦ ಮಂದಿ ವಿರುದ್ಧ ಐಪಿಸಿ ಸೆಕ್ಸನ್‌ ೧೪೭(ಗಲಭೆ) ಹಾಗೂ ಎಸ್ಪಿ, ಎಸ್ಟಿ ಪಂಗಡಗಳ ಮೇಲಿನ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.