Mysore
20
overcast clouds

Social Media

ಶನಿವಾರ, 15 ಆಗಸ್ಟ್ 2026
Light
Dark

ನ್ಯಾಯಮೂರ್ತಿಗಳ ವಿರುದ್ಧ ಲೋಕಪಾಲ ಆದೇಶ: ಸುಪ್ರೀಂನಿಂದ ಮಾರ್ಚ್.‌18ಕ್ಕೆ ಅರ್ಜಿ ವಿಚಾರಣೆ

ನವದೆಹಲಿ: ಸುಪ್ರೀಂಕೋರ್ಟ್‌ ಮಾರ್ಚ್‌.18 ರಂದು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ವಿರುದ್ಧದ ಲೋಕಪಾಲ ಆದೇಶಕ್ಕೆ ತಡೆ ನೀಡಿರುವ ಸ್ವಯಂಪ್ರೇರಿತ ದೂರಿನ ಅರ್ಜಿ ವಿಚಾರಣೆಯನ್ನು ಮಾಡಲಿದೆ.

ಈ ಅರ್ಜಿಯನ್ನು ಅಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ, ಅಭಯ್‌ ಎಸ್‌.ಓಕಾ ಮತ್ತು ಸೂರ್ಯಕಾಂತ್‌ ಅವರ ವಿಶೇಷ ನ್ಯಾಯಪೀಠವೂ ವಿಚಾರಣೆ ನಡೆಸಲಿದೆ ಎಂ ಮಾಹಿತಿ ಲಭ್ಯವಾಗಿದೆ.

ಸುಪ್ರೀಂಕೋರ್ಟ್‌, ಹೈಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ಲೋಕಪಾಲ ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿತ್ತು. ಆದರೆ ಫೆಬ್ರವರಿ.20ರಂದು ಲೋಕಪಾಲ ಆದೇಶಕ್ಕೆ ತಡೆ ನೀಡಿತ್ತು.

ಇನ್ನು ಕೇಂದ್ರ ಸರ್ಕಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಲೋಕಪಾಳ ರಿಜಿಸ್ಟ್ರಾರ್‌ ಮತ್ತು ಹೈಕೋರ್ಟ್‌ನ ಹಾಲಿ ಹೆಚ್ಚುವರಿ ನ್ಯಾಯಮೂರ್ತಿ ವಿರುದ್ಧ ದೂರು ಸಲ್ಲಿಸಿರುವ ವ್ಯಕ್ತಿಗೂ ಸಮನ್ಸ್‌ ಜಾರಿ ಮಾಡಿತ್ತು.

ಏನಿದು ಪ್ರಕರಣ?

ದೂರುದಾರನ ವಿರುದ್ಧ ಖಾಸಗಿ ಕಂಪೆನಿಯೊಂದು ದಾಖಲಿಸಿ, ಈ ದೇಶದ ಹೈಕೋರ್ಟ್‌ವೊಂದರ ನ್ಯಾಯಮೂರ್ತಿ ಒಬ್ಬರು ಅರ್ಜಿ ವಿಚಾರಣೆಯನ್ನು ನಡೆಸಬೇಕಿತ್ತು. ಆದರೆ ಹೈಕೋರ್ಟ್‌ನ ನ್ಯಾಯಮೂರ್ತಿ ಒಬ್ಬರು ಆ ಖಾಸಗಿ ಕಂಪೆನಿಗೆ ಅನುಕೂಲ ಮಾಡಕೊಡುವ ಸಲುವಾಗಿ ಜಿಲ್ಲಾ ನ್ಯಾಯಾಲಯವೊಂದ ಹೆಚ್ಚುವರಿ ನ್ಯಾಯಾಧೀಶ ಮತ್ತು ಅರ್ಜಿ ವಿಚಾರಣೆ ನಡೆಸಬೇಕಿದ್ದ ಹೈಕೋರ್ಟ್‌ನ ನ್ಯಾಯಮೂರ್ತಿಯ ಮೇಲೆ ಪ್ರಭಾವ ಬೀರಿದ್ದರು ಎಂದು ಆರೋಪಿಸಿ ಅರ್ಜಿದಾರ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದರು.

ಈ ದೂರುಗಳನ್ನು ಪರಿಗಣಿಸಿದ ಲೋಕಪಾಲ ಸಂಸ್ಥೆಯೂ ಹಾಲಿ ಹೆಚ್ಚುವರಿ ನ್ಯಾಯಮೂರ್ತಿ ವಿರುದ್ಧ ಜನವರಿ.27ರಂದು ಆದೇಶ ನೀಡಿತ್ತು.

Tags:
error: Content is protected !!