Mysore
20
overcast clouds
Light
Dark

ಲೋಕ ಸಮರ 2024 : ಕೊಳಕ್ಕೆ ಇವಿಎಂ ಯಂತ್ರ ಎಸೆದು ಆಕ್ರೋಶ

ಪಶ್ಚಿಮ ಬಂಗಾಳ: ಲೋಕಸಭಾ ಚುನಾವಣೆಯ ಅಂತಿಮ ಘಟ್ಟದ ಮತದಾನ ಇಂದು(ಜೂ.1) ಮುಕ್ತಾಯವಾಗಲಿದ್ದು, ಘಟಾನುಘಟಿಗಳ ಭವಿಷ್ಯ ನಿರ್ಧಾರವಾಗಲಿದೆ. ಪ್ರಧಾನಿ ಮೋದಿ ಅವರು ಸ್ಪರ್ಧಿಸಿರುವ ವಾರಣಾಸಿ ಕ್ಷೇತ್ರಕ್ಕೂ ಕೂಡ ಇಂದೇ ಮತದಾನ ನಡೆಯುತ್ತಿದೆ. ಜೊತೆಗೆ ಪಶ್ಚಿಮ ಬಂಗಳಾದ ಒಂಬತ್ತು ಕ್ಷೇತ್ರಗಳಿಗೂ ಇಂದು ಮತದಾನ ನಡೆಯುತ್ತಿದೆ.

ಪಶ್ಚಿಮ ಬಂಗಾಳದ ಜಾದವ್‌ಪುರ ಕ್ಷೇತ್ರದ ಭಾಂಗಾರ್‌ನ ಸತುಲಿಯಾದಲ್ಲಿ ಇಂಡಿಯನ್‌ ಸೆಕ್ಯೂಲರ್‌ ಫ್ರಂಟ್‌ ಮತ್ತು ಸಿಪಿಐ(ಎಂ) ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು, ಅಲ್ಲಲ್ಲಿ ಹಿಂಸಾಚಾರ ನಡೆದಿವೆ. ಪರಿಸ್ಥಿತಿ ನಿಯಂತ್ರಣ ಕಳೆದುಕೊಂಡ ಪರಣಾಮ ಕಿಡಿಗೇಡಿಗಳು ಮತಗಟ್ಟೆಗಳಿಗೆ ಬಾಂಬ್‌ ದಾಳಿ ನಡೆಸಿದ್ದಾರೆ. ಬಳಿಕ ಎಲೆಕ್ಟ್ರಾನಿಕ್‌ ಮತಯಂತ್ರವನ್ನು ಕೊಳಕ್ಕೆ ಎಸೆದಿದ್ದಾರೆ.

ಹಿಂಸಾಚಾರದ ವೇಳೆ ಹಲವರಿಗೆ ಗಾಯಗಳಾಗಿದ್ದು, ಪರಿಸ್ಥಿತಿ ಉಲ್ಬಣಗೊಂಡಿತ್ತು ಎಂದು ವರದಿಯಾಗಿದೆ.

 

https://x.com/ians_india/status/1796746866308038855?t=_S94RHL8hcf58td5iPOLJQ&s=19