Mysore
23
overcast clouds

Social Media

ಭಾನುವಾರ, 06 ಸೆಪ್ಟೆಂಬರ್ 2026
Light
Dark

ಕೇರಳ: ಕೃಷಿ ಹೊಂಡ ಅಗೆಯುವ ವೇಳೆ ಭಾರಿ ಮೌಲ್ಯದ ನಿಧಿ ಪತ್ತೆ

ಕೇರಳ/ಕಣ್ಣೂರು: ಮಳೆ ನೀರು ಕೊಯ್ಲು ಹೊಂಡವನ್ನು ಅಗೆಯುತ್ತಿದ್ದ ಮಹಿಳಾ ಕರ್ಮಿಕರಿಗೆ ಸಿಧಿ ಸಿಕ್ಕಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ.

ಕೃಷಿ ಹೊಂಡ ಅಗೆಯುತ್ತಿದ್ದಾಗ ಹೊಳಪಿನ ವಸ್ತು ಕಂಡ ಕಾರ್ಮಿಕರು ಮೊದಲು ಬಾಂಬ್‌ ಎಂದು ಭಯಪಟ್ಟು ದೂರು ಸರಿದರು. ನಂತರ ಮಾಟ ಮಂತ್ರದ ವಸ್ತುಗಳಿರಬಹುದೇನೊ ಎಂದು ಸುಮ್ಮನಿದ್ದರು. ಆದರೆ, ಅಗೆದಾಗ ಬಂಗಾರ, ವಜ್ರ, ಚಿನ್ನದ ನಾಣ್ಯಗಳು ಸೇರಿದಂತೆ ಆಭರಣಗಳ ನಿಧಿ ಪತ್ತೆಯಾಯಿತು ಎಂದು ಮಹಿಳೆಯೊಬ್ಬರು ಘಟನೆ ಬಗ್ಗೆ ತಿಳಿಸಿದ್ದಾರೆ.

ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ನಿಧಿ ಹಾಗೂ ನಿಧಿ ಪತ್ತೆಯಾಗಿರುವ ಸ್ಥಳದ ಬಗ್ಗೆ ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗಾಗಿ ಈ ಸ್ಥಳದಲ್ಲಿ ಉತ್ಖನನ ಮಾಡುವುದಾಗಿ ಇಲಾಖೆಯ ಅಧಿಕಾರಿ ತಿಳಿಸಿದರು ಎಂದು ಪೊಲೀಸರು ಹೇಳಿದ್ದಾರೆ.

 

Tags:
error: Content is protected !!