Mysore
23
broken clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಕರಾಚಿ: ಭೀಕರ ಬಿಸಿಗಾಳಿಗೆ 450ಕ್ಕೂ ಹೆಚ್ಚು ಮಂದಿ ಸಾವು

ಕರಾಚಿ(ಪಾಕಿಸ್ತಾನ):‌ ಪಾಕಿಸ್ತಾನದ ಹಲವಾರು ಭಾಗಗಳಲ್ಲಿ ಭೀಕರ ಬಿಸಿಗಾಳಿ ಎದುರಾಗಿದ್ದು, ಬಿಸಿಗಾಳಿಯ ತೀವ್ರತೆಯಿಂದ ಕರಾಚಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ 450ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಎಧಿ ಫೌಂಡೇಶನ್‌ ಇಂದು(ಜೂ.26) ತಿಳಿಸಿದೆ.

ದೇಶದ ಅತಿದೊಡ್ಡ ನಗರ ಹಾಗೂ ಬಂದರು ನಗರವಾಗಿರುವ ಕರಾಚಿಯಲ್ಲಿ ಶನಿವಾರದಿಂದ(ಜೂ.22) 40ಕ್ಕಿಂತ ಹೆಚ್ಚು ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಾಗಿದೆ.

ಕರಾಚಿಯಲ್ಲಿ ಶವಗಳನ್ನು ಇಡಲು ಶವಾಗಾರದಲ್ಲಿ ಜಾಗ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.  ಸಾವಿನ ಮತ್ತಷ್ಟು ಹೆಚ್ಚಾಗುತ್ತಿದ್ದು, ಈ ಶವಗಳ ಪೈಕಿ ಹೆಚ್ಚು ತಾಪಮಾನದ ಹೊರತಾಗಿಯೂ, ವಿದ್ಯುತ್‌ ಆಭಾವ ಎದುರಿಸುತ್ತಿರುವ ಪ್ರದೇಶಗಳಿಂದ ಬಂದ ಶವಗಳೇ ಹೆಚ್ಚು ಎಂಬುದು ಆಘಾತಕಾರಿ ಎಂದು ಎಧಿ ಫೌಂಡೇಶನ್‌ ಮುಖ್ಯಸ್ಥ ಫೈಸಲ್‌ ಎಧಿ ತಿಳಿಸಿದ್ದಾರೆ.

ಕರಾಚಿ ಹಾಗೂ ಸಿಂಧ್‌ ಪ್ರಾಂತ್ಯದಲ್ಲಿ ಗಾಳಿಯ ವೇಗ ಸರಾಸರಿಗಿಂತ ತೀವ್ರವಾಗಿದೆ.  ಸರ್ಕಾರ, ನಗರ ಸುತ್ತಮುತ್ತ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸಿದ್ದತೆಗಳನ್ನು ಹೆಚ್ಚಿಸಿದೆ. 77 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಧಿ ಸಂಸ್ಥೆ ತಿಳಿಸಿದೆ.

Tags: