Mysore
22
overcast clouds
Light
Dark

ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಆಯ್ಕೆಯಾದ ಕಪಿಲ್‌ ಸಿಬಲ್‌

ನವದೆಹಲಿ: ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲರಾದ ಕಪಿಲ್‌ ಸಿಬಲ್‌ ಅವರು ಆಯ್ಕೆಯಾಗಿದ್ದಾರೆ.

ಹಾರ್ವರ್ಡ್‌ ಕಾನೂನು ಶಾಲೆಯಲ್ಲಿ ಪದಿಧರರಾದ ಅವರನ್ನು ೧೯೮೩ರಲ್ಲಿ ಸರ್ಕಾರ ಅವರನ್ನು ಹಿರಿಯ ವಕೀಲರನ್ನಾಗಿ ನೇಮಿಸಿತು. ಮತ್ತು ೧೯೮೯-೯೦ರ ಅವಧಿಯಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್‌ ಹಿರಿಯ ಮುಖಂಡ ಜೈರಾಮ್‌ ರಮೇಶ್‌, ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಕಪಿಲ್‌ ಸಿಬಲ್‌ ಭಾರೀ ಅಂತರದಿಂದ ಆಯ್ಕೆಯಾಗಿದ್ದಾರೆ. ಇದು ಪ್ರಜಾಪ್ರಭುತ್ವ, ಪ್ರಗತಿಪರ ಶಕ್ತಿಗಳಿಗೆ ದೊಡ್ಡ ಗೆಲುವಾಗಿದೆ. ರಾಷ್ಟ್ರಮಟ್ಟದಲ್ಲಿ ದೊಡ್ಡದಾಗಿ ಬದಲಾವಣೆಯಾಗುವುದಕ್ಕೆ ಇದು ಟ್ರೈಲರ್‌ ಆಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಕಪಿಲ್‌ ಸಿಬಲ್‌ ೧೯೯೫ ಹಾಗೂ ೨೦೦೨ರ ಯುಪಿಎ ಅವಧಿಯಲ್ಲಿ ಮೂರು ಬಾರಿ ಎಸ್‌ಸಿಬಿಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.