Mysore
34
few clouds

Social Media

ಶನಿವಾರ, 11 ಏಪ್ರಿಲ 2026
Light
Dark

ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ : ಪಟ್ಟು ಬಿಡದ ಕಮಲ್‌ ಹಾಸನ್‌

kamal hasan

ಬೆಂಗಳೂರು : ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿಕೆ ನೀಡಿ ಕನ್ನಡಿಗರಿಂದ ಪ್ರತಿಭಟನೆ ಹಾಗೂ ಛೀಮಾರಿಗೆ ಒಳಗಾಗಿರುವ ಬಹುಭಾಷ ನಟ ಕಮಲ್‌ ಹಾಸನ ಅವರು ತಮ್ಮ ಹಠಮಾರಿ ಧೋರಣೆಯನ್ನು ಮುಂದುವರೆಸಿದ್ದಾರೆ.

ಇಂದು ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹೇಳಿದ್ದು ಸರಿ ಅಲ್ಲ ಎಂದು ಸಾಬೀತಾಗುವವರೆಗೂ ನಾನು ಯಾರ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾರೆ.

ನಾನು ಸಂವಿಧಾನ ಮತ್ತು ಕಾನೂನಿನಲ್ಲಿ ನಂಬಿಕೆಯುಳ್ಳವನು. ನನ್ನ ಪ್ರೀತಿ ಕರ್ನಾಟಕ,ಕನ್ನಡ,ತೆಲುಗು ಹಾಗೂ ಮಲಯಾಳಂಗೆ ಇದ್ದೇ ಇದೆ. ಅಜೆಂಡಾ ಇಟ್ಟು ರಾಜಕಾರಣ ಮಾಡುವವರನ್ನು ಹೊರತುಪಡಿಸಿ ಯಾರೂ ಇದನ್ನು ಅಲ್ಲಗೆಳೆಯುವುದಿಲ್ಲ ಎಂದಿದ್ದಾರೆ.

ಒಂದು ವೇಳೆ ನಾನಾಡಿದ್ದು ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ. ಇಲ್ಲದಿದ್ದರೇ ಇಲ್ಲ ಎಂದು ಅವರು ಹೇಳಿದ್ದಾರೆ. ಈ ಮೂಲಕ ಅವರು ತಮ್ಮ ಹಠಮಾರಿ ಧೋರಣೆಯನ್ನು ಮುಂದುವರೆಸಿದ್ದಾರೆ ಎಂದು ಸಾಬೀತಾಗುತ್ತಿದೆ.

Tags:
error: Content is protected !!