ಬಿಹಾರ/ಪಾಟ್ನಾ: ಜೆಡಿಯು (ಜನತಾ ದಳ ಯುನೈಟೆಡ್) ಯುವ ಮುಖಂಡ ಸೌರಭ್ ಕುಮಾರ್‌ನನ್ನು ಬುಧವಾರ (ಏ.24) ತಡರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಬಿಹಾರ ರಾಜಧಾನಿ ಪಾಟ್ನಾದ ಪನ್‌ಪುನ್‌ನಲ್ಲಿ ತಡ ರಾತ್ರಿ 33 ವರ್ಷದ ಸೌರಭ್ ಕುಮಾರ್ ಮೇಲೆ ದಾಳಿ ಕೋರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ತಡರಾತ್ರಿ ಸೌರಭ್ ಕುಮಾರ್ ಪರ್ಸಾ ಬಜಾರ್ ಗ್ರಾಮದಲ್ಲಿ ಸ್ನೇಹಿತ ಮದುವೆ ಸಮಾರಂಭದಿಂದ ವಾಪಾಸುಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ನಾಲ್ವರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ಸೌರಭ್ ಅವರ ತಲೆ ಭಾಗಕ್ಕೆ ಬಡಿದಿದ್ದು ಮರಣ ಹೊಂದಿದ್ದಾರೆ ಹಾಗೂ ಇವರ ಜೊತೆಯಲ್ಲಿದ್ದ ಸ್ನೇಹಿತ ಮುನ್ಮನ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸೌರಭ್ ಕುಮಾರ್ ಅವರ ಮೇಲೆ ನಡೆದ ದಾಳಿಯ ಸಿಸಿ ಟಿವಿ ದೃಶ್ಯಗಳನ್ನಾಧರಿಸಿ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.