ನವದೆಹಲಿ: ಜೆಎಂಎಂ ಪಕ್ಷ ತೊರೆದ ಎರಡು ದಿನಗಳ ಬಳಿಕ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ಇಂದು (ಶುಕ್ರವಾರ, ಆ.30) ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಅವರ ಸಮ್ಮುಖದಲ್ಲಿ ಸೊರೆನ್ ಅವರು ಬಿಜೆಪಿಗೆ ಸೇರಿಕೊಂಡರು.
67 ವರ್ಷದ ಸೊರೆನ್ ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, 1990 ರ ದಶಕದಲ್ಲಿ ಪ್ರತ್ಯೇಕ ರಾಜ್ಯ ರಚಿಸುವ ಹೋರಾಟದಲ್ಲಿ ಮುಂಚುಣಿಯಲ್ಲಿದ್ದ ಇವರ ಸಾಧನೆಯನ್ನು ಪರಿಗಣಿಸಿ ಸೊರೆನ್ ಅವರಿಗೆ ʼಜಾರ್ಖಂಡ್ ಹುಲಿʼ ಎಂಬ ಬಿರುದು ನೀಡಿ ಗೌರವಿಸಲಾಗಿದೆ.
ಇನ್ನು 81 ಸದಸ್ಯ ಬಲವಿರುವ ಜಾರ್ಖಂಡ್‌ಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ.