Mysore
24
broken clouds

Social Media

ಗುರುವಾರ, 12 ಡಿಸೆಂಬರ್ 2024
Light
Dark

ಭಾರೀ ಬಿಗಿ ಭದ್ರತೆಯಲ್ಲಿ ಅಮರನಾಥ ಯಾತ್ರೆ 2024 ಆರಂಭ

ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಾರ್ಷಿಕ ಅಮರನಾಥ ಯಾತ್ರೆ ಆರಂಭವಾಗಿದ್ದು, ಸಾವಿರಾರು ಯಾತ್ರಾರ್ಥಿಗಳು ಅಮರನಾಥ ಯಾತ್ರೆ 2024ನ್ನು ಆರಂಭಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ವಾರ್ಷಿಕ ಅಮರನಾಥ ಯಾತ್ರೆಗೆ ಚಾಲನೆ ಸಿಕ್ಕಿದ್ದು, ವಿವಿಧ ಬೇಸ್‌ ಕ್ಯಾಂಪ್‌ಗಳಿಂದ ನೋಂದಣಿ ಮಾಡಿಕೊಂಡ ಯಾತ್ರಾರ್ಥಿಗಳು ಅಮರನಾಥ ಯಾತ್ರೆ ಆರಂಭಿಸಿದ್ದಾರೆ. ಯಾತ್ರೆಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.

2024ನೇ ಸಾಲಿನ ಅಮರನಾಥ ಯಾತ್ರೆ ಇಂದು ಆರಂಭವಾಗಿದ್ದು, ಸಾವಿರಾರು ಯಾತ್ರಾರ್ಥಿಗಳು ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್‌ ಜಿಲ್ಲೆಯಲ್ಲಿರುವ ಬಾಲ್ಟಾಸ್‌ ಬೇಸ್‌ ಕ್ಯಾಂಪ್‌ನಲ್ಲಿರುವ ಪವಿತ್ರ ಗುಹೆಗೆ ಭೇಟಿ ನೀಡಲು ಯಾತ್ರೆ ಆರಂಭಿಸಿದರು.

ಅಮರನಾಥ ಯಾತ್ರೆ 2024ರ ಒಟ್ಟು 52 ದಿನಗಳ ಕಾಲ ನಡೆಯಲಿದೆ. ಶ್ರೀನಗರದಿಂದ ಸುಮಾರು 1.5 ಕಿ.ಮೀ ದೂರದಲ್ಲಿ 13,000 ಅಡಿ ಎತ್ತರವಿರುವ ಅಮರನಾಥ ಗುಹೆಗೆ ಪ್ರತಿವರ್ಷ ದೇಶದ ವಿವಿಧ ರಾಜ್ಯಗಳ ಭಕ್ತರು ಯಾತ್ರೆ ಕೈಗೊಳ್ಳುತ್ತಾರೆ.

ಅಮರನಾಥ ಯಾತ್ರೆ ಬಹಳ ಪುಣ್ಯದ ಕೆಲಸ ಎಂದು ಹಿಂದುಗಳು ನಂಬುತ್ತಾರೆ. ಪ್ರತಿವರ್ಷ ಮಳೆ, ಚಳಿಯನ್ನು ಲೆಕ್ಕಿಸದೇ ಲಕ್ಷಾಂತರ ಯಾತ್ರಾರ್ಥಿಗಳು ಅಮರನಾಥ ಯಾತ್ರೆಗಾಗಿ ಜಮ್ಮು-ಕಾಶ್ಮೀರಕ್ಕೆ ಆಗಮಿಸುತ್ತಾರೆ.

ಅಮರನಾಥ ಯಾತ್ರಾರ್ಥಿಗಳ ಮೇಲೆ ಭಯೋತ್ಪಾದಕ ದಾಳಿಗಳು ಹಲವು ಬಾರಿ ನಡೆದಿದೆ. ಆದ್ದರಿಂದ ಕೇಂದ್ರ ಸರ್ಕಾರ ಅಮರನಾಥ ಯಾತ್ರೆ ಸಂದರ್ಭದಲ್ಲಿ ಹೆಚ್ಚುವರಿ ಬಂದೋಬಸ್ತ್‌ ಮಾಡುತ್ತದೆ. ಜಮ್ಮು-ಕಾಶ್ಮೀರದ ಪೊಲೀಸರ ಜೊತೆ ಭಾರತೀಯ ಸೇನೆಯ ಯೋಧರು ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಾರೆ.

ಅಮರನಾಥ ಯಾತ್ರೆ 2024ರ ಭದ್ರತೆಗಾಗಿ 13 ಪೊಲೀಸ್‌ ತಂಡಗಳು, ಎಸ್‌ಡಿಆರ್‌ಎಫ್‌ನ 11 ತಂಡಗಳು, ಬಿಎಸ್‌ಎಫ್‌ನ 4 ತಂಡಗಳು, ಸಿಆರ್‌ಪಿಎಫ್‌ಎ 2 ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಉಧಮ್‌ಪುರ್‌ನಿಂದ ಬನಿಹಾಲ್‌ ತನಕ 10 ಅತ್ಯಾಧುನಿಕ ಕ್ಯಾಮರಾ ಅಳವಡಿಕೆ ಮಾಡಿ ಕಣ್ಗಾವಲು ವಹಿಸಲಾಗಿದೆ.

Tags: