Mysore
17
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಅಂಬೇಡ್ಕರ್‌ ಅವರನ್ನು ಪದೇ ಪದೇ ಅವಮಾನಿಸಿದ್ದೇ ಕಾಂಗ್ರೆಸ್:‌ ಪ್ರಧಾನಿ ಮೋದಿ ವಾಗ್ದಾಳಿ

narrendra modi

ಹರಿಯಾಣ: ಈ ಹಿಂದೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಆಶಯಕ್ಕೆ ವಿರುದ್ಧವಾಗಿ ವಕ್ಫ್‌ ಕಾನೂನು ರೂಪಿಸಿದ್ದು ಕಾಂಗ್ರೆಸ್‌ ಪಕ್ಷ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಹರಿಯಾಣದ ಹಿಸಾರ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಸಂವಿಧಾನದ ಮೂಲ ಆಶಯವನ್ನು ಹಾಳು ಮಾಡುವಂತೆ ವಕ್ಫ್‌ ಕಾನೂನನ್ನು ಕಾಂಗ್ರೆಸ್‌ ರೂಪಿಸಿತ್ತು.

ಕಳೆದ 2013ರಲ್ಲಿ ಕಾಂಗ್ರೆಸ್‌ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತಂದಿತ್ತು. ತನ್ನ ಮತ ಬ್ಯಾಂಕ್‌ ಅನ್ನು ತೃಪ್ತಿಪಡಿಸಿಕೊಳ್ಳಲು ತರಾತುರಿಯಲ್ಲಿ ತಿದ್ದುಪಡಿ ಮಾಡಿತ್ತು ಎಂದು ವಾಗ್ದಾಳಿ ನಡೆಸಿದರು.

ಇನ್ನು ಕಾಂಗ್ರೆಸ್ ಕೆಲ ಮೂಲಭೂತವಾದಿಗಳನ್ನು ಮಾತ್ರ ಖುಷಿಪಡಿಸಿದೆ. ಉಳಿದ ಸಮಾಜವು ಶೋಚನೀಯ, ಅವಿದ್ಯಾವಂತ ಮತ್ತು ಬಡವರಾಗಿಯೇ ಉಳಿದಿದೆ. ಕಾಂಗ್ರೆಸ್ಸಿನ ಈ ದುಷ್ಟ ನೀತಿಗೆ ದೊಡ್ಡ ಪುರಾವೆ ವಕ್ಫ್‌ ಕಾಯ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಬಾಬಾ ಸಾಹೇಸ್‌ ಅಂಬೇಡ್ಕರ್‌ ಅವರನ್ನು ಪದೇ ಪದೇ ಅವಮಾನಿಸಿದ್ದು ಕಾಂಗ್ರೆಸ್‌. ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ ಮಾಡಿದ್ದ ಮೋಸವನ್ನು ನಾವು ಮರೆಯಲು ಕೂಡ ಆಗಲ್ಲ. ಅಂಬೇಡ್ಕರ್‌ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದರು ಎಂದು ಕಾಂಗ್ರೆಸ್‌ ಪಕ್ಷದ ವಿರುದ್ಧ ಹರಿಹಾಯ್ದರು.

Tags:
error: Content is protected !!