Mysore
30
light rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

ವಿಶ್ವದ ಎತ್ತರದ ಹಿಮ ಪರ್ವತ ಏರಿ ಮೈಸೂರಿನ ವೈದ್ಯೆ ಡಾ.ಉಷಾ ಹೆಗ್ಡೆ ಸಾಧನೆ

ಮೈಸೂರು: ಮೈಸೂರಿನ ಐರನ್‌ ಮ್ಯಾನ್‌ ಖ್ಯಾತಿಯ ಡಾ.ಉಷಾ ಹೆಗ್ಡೆ ವಿಶ್ವದ ಅತಿ ಎತ್ತರದ ಹಿಮ ಪರ್ವತ ಏರುವ ಮೂಲಕ ಈ ಸಾಧನೆ ಮಾಡಿದ ಕರ್ನಾಟಕದ ಮೊದಲ ನಾಗರೀಕ ಮಹಿಳೆ ಎನಿಸಿದ್ದಾರೆ.

52 ವರ್ಷದ ಉಷಾ ಹೆಗ್ಡೆ ಅವರು ಜೆಎಸ್‌ಎಸ್‌ ಡೆಂಟಲ್‌ ಕಾಲೇಜಿನ ಪ್ರೊಫೆಸರ್‌ ಆಗಿದ್ದಾರೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಓದಿದ್ದು, ಮೈಸೂರಿನ ಜೆಎಸ್‌ಎಸ್‌ ಡೆಂಟಲ್‌ ಕಾಲೇಜಿನಲ್ಲಿ. ಅದೇ ಕಾಲೇಜಿನಲ್ಲಿ ಪ್ರೊಫೆಸರ್‌ ಆಗಿದ್ದುಕೊಂಡು ಹಿಮಾಲಯ ಪರ್ವತ ಏರಿ ಮಹೋನ್ನತ ಸಾಧನೆ ಮಾಡಿದ್ದಾರೆ.

52 ದಿನಗಳ ಕಾಲ ಸುದೀರ್ಘ ಪ್ರವಾಸ ಮಾಡಿ ಬಂದ ಧೀರ ವನಿತೆ ಡಾ.ಉಷಾ ಹೆಗ್ಡೆಯವರ ಪರ್ವಾರೋಹಣ ಮೈನವಿರೇಳಿಸಿದೆ.

ಮೊದಲ ದಿನ ಏಪ್ರಿಲ್‌.2ರಂದು ಮೈಸೂರಿನಿಂದ ಹೊರಟ ಉಷಾ ಅವರು ವಾಪಸ್‌ ಬಂದಿದ್ದು ಮೇ.25ರಂದು. ಏಪ್ರಿಲ್‌ 6ರಿಂದ ಹಿಮಾಲಯ ಚಾರಣ ಆರಂಭಿಸಿದ್ದಾರೆ. ನೇಪಾಳದ ಲುಕ್ಲಾ ಜಾಗದಿಂದ ನಡಿಗೆ ಆರಂಭಿಸಿ ಏಪ್ರಿಲ್‌ 8ರಂದು ಟ್ರಕ್ಕಿಂಗ್‌ ಬೇಸ್‌ ಕ್ಯಾಂಪ್‌ ರೀಚ್‌ ಆಗಿದ್ದಾರೆ.

ಒಂದು ರಾತ್ರಿ ಕ್ಯಾಂಪ್‌ನಲ್ಲಿ ಕಳೆದ ಬಳಿಕ ಕ್ಯಾಂಪ್‌ 2 ತಲುಪಿ ಎರಡು ದಿನ ಕಳೆದಿದ್ದಾರೆ. ನಂತರ 3ನೇ ದಿನ ಎರಡನೇ ಕ್ಯಾಂಪ್‌ನಿಂದ ಹೊರಟು 3ನೇ ಕ್ಯಾಂಪ್‌ನಲ್ಲಿ ಒಂದು ದಿನ ಕಳೆದಿದ್ದಾರೆ. ನಂತರ ಕ್ಯಾಂಪ್‌ 4ಕ್ಕೆ ತಲುಪಿ 3 ಗಂಟೆ ಅಲ್ಲೇ ತಂಗಿದ ಬಳಿದ ರಾತ್ರಿಯಿಡೀ ನಡೆದು ಮೇ.19 ಬೆಳಿಗ್ಗೆ 6.10ಕ್ಕೆ ತುದಿ ತಲುಪಿದ್ದಾರೆ.

ಇದಕ್ಕಾಗಿ ಎಡು ವರ್ಷಗಳಿಂದ ತಯಾರಿ ಮಾಡಿಕೊಂಡಿದ್ದ ಡಾ.ಉಷಾ ಹೆಗ್ಡೆ ಅವರು, ಈ ಮೊದಲು ದೇಶದ ಇತರ ಸ್ಥಳಗಳಲ್ಲಿ ಪರ್ವತ ಹತ್ತಿ ತಯಾರಿ ನಡೆಸಿದ್ದರು.

 

Tags: