ಟೆಹರಾನ್ : ಇರಾನಿನ ಮೂರು ಪರಮಾಣು ನೆಲೆಗಳ ಮೇಲೆ ಭಾನುವಾರ ಅಮೆರಿಕ ಅನಿರಿಕ್ಷಿತ ದಾಳಿ ನಡೆಸಿತ್ತು. ಇಂದು( ಸೋಮವಾರ) ಪ್ರತೀಕಾರವಾಗಿ ಇರಾನ್, ಕತಾರ್ ಮತ್ತು ಇರಾಕ್ ನಲ್ಲಿರುವ ಅಮೆರಿಕ ವಾಯು ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಕತಾರ್ ನಲ್ಲಿನ ಅಲ್ ಉದೈದ್ ವಾಯುನೆಲೆ ಹಾಗೂ ಪಶ್ಚಿಮ ಇರಾಕ್ ನಲ್ಲಿರುವ ಅಮೆರಿಕ ವಾಯುನೆಲೆ ಅಲ್ ಅಸ್ಸಾದ್ ಮೇಲೂ ಇರಾನ್ ದಾಳಿ ಮಾಡಿದೆ.
ಯಾವುದೇ ಸಾವು ನೋವುಗಳು ವರದಿ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.
ಅಮೆರಿಕ ದಾಳಿಗೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಭಾನುವಾರ ಪ್ರತಿಜ್ಞೆ ಮಾಡಿತ್ತು.