ನವದೆಹಲಿ: ಬ್ಯಾಂಕುಗಳಲ್ಲಿ ಸಾಲಕ್ಕೆ ವಿಧಿಸಲಾಗುತ್ತಿರುವ ಬಡ್ಡಿದರದಲ್ಲಿ ಇನ್ನಷ್ಟು ಇಳಿಕೆ ಕಾಣಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯ ಪಟ್ಟಿದ್ದಾರೆ.
ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಕಸಿತ ಭಾರತದ ನಿರ್ಮಾಣಕ್ಕೆ ಬ್ಯಾಂಕ್ ಸಾಲ ಎಷ್ಟು ಮುಖ್ಯವೋ, ಅಷ್ಟೇ ಕೈಗಾರಿಕೆಗಳು ಸಹ ಮುಖ್ಯ. ಕೈಗಾರಿಕೆಗಳಲ್ಲಿ ಹೊಸ ಘಟಕಗಳು ವಿಸ್ತರಣೆಯಾಗಬೇಕೆಂದರೆ ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯಬೇಕು ಎಂದರು.
ಬ್ಯಾಂಕ್‌ಗಳಲ್ಲಿ ಕೈಗಾರಿಕೆಗಳು ಹೊಸ ಹೂಡಿಕೆ ಮಾಡಲಿ ಎಂಬುದನ್ನು ನಾವು ಬಯಸುತ್ತೇವೆ. ಆದರೆ ಕೈಗಾರಿಕೆಗಳು ಹೂಡಿಕೆ ಮಾಡಲು ಬಡ್ಡಿದರಗಳನ್ನು ಇಳಿಕೆ ಮಾಡುವುದು ಮುಖ್ಯವಾಗಿದೆ ಎಂದು ಹೇಳಿದರು.