ನವದೆಹಲಿ: ಇಂಡಿಯಾ ಮೈತ್ರಿಕೂಟ ಒಗ್ಗಟ್ಟಾಗಿ ಮುಂದಿನ ಲೋಕಸಭೆ ಚುನಾವಣೆ ಎದುರಿಸಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟದಲ್ಲಿರುವ ಒಡಕಿನ ಬಗ್ಗೆ ಮಾತನಾಡಿದ ಅವರು, ಸ್ಥಳೀಯ ಚುನಾವಣೆಯಲ್ಲಿ ರಾಜ್ಯಗಳು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಿದ್ದೇವೆ. ಇದು ವಿರೋಧ ಪಕ್ಷಗಳಿಗೆ ಒಡಕು ಎಂದು ಕಾಣಿಸುತ್ತಿರಬಹುದು ಎಂದು ಹೇಳಿದರು.
ಆದರೆ, ಲೋಕಸಭೆ ಚುನಾವಣೆ ಅಂತ ಬಂದಾಗ ಇಂಡಿಯಾ ಮೈತ್ರಿಕೂಟವು ಮುಂದುವರೆಯಲಿದೆ. ದೇಶದ ಹಿತಾಶಕ್ತಿಗಾಗಿ, ಸಂವಿಧಾನ ರಕ್ಷಣೆಗಾಗಿ ಮೈತ್ರಿ ಉಳಿಯಬೇಕು ಎಂದು ಹೇಳಿದರು.





