ವಾಷಿಂಗ್ಟನ್: ಭಾರತದ ಜನನ ಪ್ರಮಾಣ ಗಣನೀಯವಾಗಿ ಕುಸಿತವಾಗುತ್ತಿದೆ. ಭಾರತದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಅಗತ್ಯವಿರುವ ಜನಸಂಖ್ಯೆಗಿಂತ ಸಂತಾನೋತ್ಪತ್ತಿಯ ದರ ಕಡಿಮೆಯಾಗಿದೆ ಎಂದು ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಎಲಾನ್ ಮಸ್ಕ್ ಭಾರತದಲ್ಲಿ ಜನನ ಪ್ರಮಾಣದ ದರ ಕುಸಿತ ಕಂಡಿದೆ. ಭಾರತದ ಜನಸಂಖ್ಯೆಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಅಗತ್ಯವಿರುವುದಕ್ಕಿಂತಲೂ ಇಳಿಕೆ ಆಗಿದೆ. ಅದರಲ್ಲೂ ವಿಶೇಷವಾಗಿ ಭಾರತದ ವಿದ್ಯಾವಂತ ಕುಟುಂಬ ಅಥವಾ ಸಮುದಾಯಗಳಲ್ಲಿ ಈ ದರವು ಹಲವು ವರ್ಷಗಳ ಹಿಂದೆಯೇ ಕುಸಿದಿತ್ತು ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.




