ಉತ್ತರ ಪ್ರದೇಶ: ಗಂಡ ತನಗೆ ಕುರ್ಕುರೆ ತರಲಿಲ್ಲ ಎಂದು ಮುನಿಸಕೊಂಡ ಹೆಂಡತಿ ಗಂಡನ ವಿರುದ್ಧ ಪೊಲೀಸ್ ಠಾಣಾ ಮೆಟ್ಟಿಲೇರಿದ್ದು, ಈ ಪ್ರಕರಣ ಡಿವೋರ್ಸ್ ಹಂತಕ್ಕೆ ತಲುಪಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಆಜ್ ತಕ್ ನೀಡಿರುವ ವರದಿಯ ಪ್ರಕಾರ, ಮಹಿಳೆಯೂ ಕಳೆದ ಒಂದೂರವರೆ ತಿಂಗಳಿನಿಂದ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಾರೆ. ಗಂಡ ತನ್ನನ್ನು ನೋಡಲು ಬಂದ ವೇಳೆ ಮಹಿಳೆ ಗಂಡನ ಮೇಲೆ ದೂರು ನೀಡಲು ಠಾಣೆ ಬಂದಿದ್ದಾಳೆ.
ಮಹಿಳೆ ನೀಡಿದ ದೂರಿನ ಮೇಲೆ ವಿಚಾರಣೆ ನಡೆಸಿದಾಗ ಇವರಿಬ್ಬರ ನಡುವೆ 5ರೂ ಕುರ್ಕುರೆಗೆ ಜಗಳ ಬಂದಿದೆ ಎಂಬುದು ಗೊತ್ತಾಗಿದೆ.
ಈ ಇಬ್ಬರಿಗೂ ಕೌನ್ಸಿಲಿಂಗ್ ಮಾಡಿದ ಡಾ. ಸತೀಶ್ ಅವರು ಹೇಳುವಂತೆ ಕಳೆದ ವರ್ಷ ಈ ಇಬ್ಬರಿಗೂ ಮದುವೆಯಾಗಿತ್ತು. ಮದುವೆಯಾದಾಗಿನಿಂದ ಪತಿ ನನಗೆ ಒಡೆಯುತ್ತಾನೆ ಎಂದು ಮಹಿಳೆ ದೂರು ನೀಡಿದರೇ, ಗಂಡ ಕೇವಲ ಐದು ರೂಪಾಯಿಯ ಕುರ್ಕುರೆಗೆ ಜಗಳ ಆಡುತ್ತಾಳೆ. ಕುರ್ಕುರೆಗಾಗಿ ತಾಯಿಯ ಮೆನೆಗೆ ಹೋಗಿದ್ದಾಳೆ ಎಂದು ಗಂಡ ಮಾಹಿತಿ ನೀಡಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿಂತೆ ಇಬ್ಬರು ರಾಜೀಯಾಗುವ ಸಾಧ್ಯತೆಯಿದ್ದು, ಮುಂದಿನ ದಿನಾಂಕ ನಿಗದಿವರೆಗೆ ಪ್ರಕರಣವನ್ನು ಮುಂದೂಡಲಾಗಿದೆ.