Mysore
24
overcast clouds

Social Media

ಭಾನುವಾರ, 05 ಏಪ್ರಿಲ 2026
Light
Dark

ಮಹಾರಾಷ್ಟ್ರದಲ್ಲಿ ಘೋರ ದುರಂತ: ಕಾರು ಬಾವಿಗೆ ಬಿದ್ದು ಒಂದೇ ಕುಟುಂಬದ 9 ಮಂದಿ ಸಾವು

ನಾಸಿಕ್:‌ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ವಾರ್ಷಿಕ ಕೌಟುಂಬಿಕ ಸಮಾರಂಭ ಮುಗಿಸಿ ಸಂಭ್ರಮದಿಂದ ಮನೆಗೆ ಮರಳುತ್ತಿದ್ದವರ ಪಾಲಿಗೆ ಬಾವಿಯೊಂದು ಮೃತ್ಯುಕೂಪವಾಗಿ ಪರಿಣಮಿಸಿದೆ. ಘಟನೆಯಲ್ಲಿ ಆರು ಮುಗ್ಧ ಮಕ್ಕಳು ಪ್ರಾಣ ಕಳೆದುಕೊಂಡಿವೆ.

ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ನೀರು ತುಂಬಿದ್ದ ಬಾವಿಗೆ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ.

ಮೃತಪಟ್ಟವರಲ್ಲಿ ಸುನೀಲ್‌ ದತ್ತಾತ್ರೇಯ ದರ್ಗೋಡೆ, ಅವರ ಪತ್ನಿ ರೇಷ್ಮಾ, ಮಗಳು ರಾಖಿ, ಸೋದರ ಸಂಬಂಧಿ ಮಾಧುರಿ ಮತ್ತು ಶ್ರಾವಣಿ ಸೇರಿದ್ದಾರೆ. ಉಳಿದಂತೆ ಆಶಾ ಅನಿಲ್‌ ದರ್ಗೋಡೆ, ಅವರ ಮಗ ಶ್ರೇಯಸ್‌, ಮಗಳು ಸೃಷ್ಟಿ ಮತ್ತು ಸೋದರ ಸಂಬಂಧಿ ಸಮೃದ್ಧಿ ಸಾವನ್ನಪ್ಪಿದ್ದಾರೆ.

ದಿಂಡೋರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ.

Tags:
error: Content is protected !!