Mysore
36
few clouds

Social Media

ಸೋಮವಾರ, 27 ಏಪ್ರಿಲ 2026
Light
Dark

ಹೊರ್ಮುಜ್‌ ಬಿಕ್ಕಟ್ಟು : ಸಂಘರ್ಷ ಶಮನಕ್ಕೆ ಇರಾನ್‌ ಹೊಸ ದಾಳ

ಟೆಹ್ರಾನ್‌ : ಅಮೆರಿಕವು ಶಾಂತಿ ಮಾತುಕತೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ ಇರಾನ್ ಸಂಘರ್ಷ ಶಮನಕ್ಕೆ ಹೊಸ ದಾಳ ಉರುಳಿಸಿದೆ.

ಪಾಕಿಸ್ತಾನದ ಸಂಧಾನಕಾರರ ಮೂಲಕ ಅಮೆರಿಕಕ್ಕೆ ಹೊಸ ಶಾಂತಿ ಪ್ರಸ್ತಾವನೆಯನ್ನು ರವಾನಿಸಿರುವ ಇರಾನ್, ಪ್ರಮುಖವಾಗಿ ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳಿಗೆ ಆದ್ಯತೆ ನೀಡುವಂತೆ ಕೋರಿದೆ. ಪ್ರಸ್ತುತ ನಡೆಯುತ್ತಿರುವ ಸಂಘರ್ಷವನ್ನು ತಕ್ಷಣವೇ ಕೊನೆಗೊಳಿಸಲು ಮತ್ತು ವಿಶ್ವದ ಪ್ರಮುಖ ವ್ಯಾಪಾರ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ತಾವು ಸಿದ್ಧ ಎಂದು ಇರಾನ್ ತಿಳಿಸಿದೆ.

ಅತ್ಯಂತ ವಿವಾದಾತ್ಮಕವಾಗಿರುವ ಮತ್ತು ಸಂಘರ್ಷದ ಕೇಂದ್ರಬಿಂದುವಾಗಿರುವ ಪರಮಾಣು ಕಾರ್ಯಕ್ರಮದ ಕುರಿತಾದ ಚರ್ಚೆಗಳನ್ನು ಸದ್ಯಕ್ಕೆ ಬದಿಗಿಟ್ಟು, ನಂತರದ ಹಂತದಲ್ಲಿ ಮಾತುಕತೆ ನಡೆಸೋಣ ಎಂಬ ನಿಲುವನ್ನು ಇರಾನ್ ತಳೆದಿದೆ. ಈ ಮೂಲಕ ಸದ್ಯದ ಉದ್ವಿಗ್ನತೆಯನ್ನು ತಣ್ಣಗಾಗಿಸುವುದು ಇರಾನ್‌ನ ತಂತ್ರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Tags:
error: Content is protected !!