Mysore
34
few clouds

Social Media

ಮಂಗಳವಾರ, 24 ಮಾರ್ಚ್ 2026
Light
Dark

ಮತ್ತಷ್ಟು ದುಬಾರಿ ಆಗಲಿದೆ ಚಹಾ ದರ: ಕಾರಣ ಇಷ್ಟೆ

ಕೋಲ್ಕತ್ತಾ: ಕಳೆದ ವರ್ಷದಂತೆ ಈ ವರ್ಷವೂ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಚಹಾ ಉತ್ಪಾದನೆ ಕುಸಿತವಾಗಿದೆ.

ಇಡೀ ದೇಶದಲ್ಲಿಯೇ ಈ ಎರಡು ರಾಜ್ಯಗಳಲ್ಲಿ ಅತಿ ಹೆಚ್ಚು ಚಹಾ ಉತ್ಪಾದಿಸಲಾಗುತ್ತದೆ. ರಫ್ತು ದರ ಇಳಿಕೆಯಾಗಿರುವುದರಿಂದ ಚಹಾ ಕೈಗಾರಿಕೆಯು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಸ್ಟೇಟ್‌ ಮಾಲೀಕರು ಹೇಳುತ್ತಿದ್ದಾರೆ.

ರಪ್ತು ದರದಲ್ಲಿ ಶೇಕಡಾ 4 ರಷ್ಟು ಇಳಿಕೆಯಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಚಹಾ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.

ಇನ್ನು ಪ್ರತಿ ಕೂಲ ಹವಾಮಾನದಿಂದ ಚಹಾ ಗಿಡಗಳ ಬೆಳವಣಿಗೆ ಕುಂಠಿತವಾಗಿದ್ದು, ಕೀಟಬಾಧೆ ಕೂಡ ನಿಯಂತ್ರಣಕ್ಕೆ ಬಂದಿಲ್ಲ.

ಇದರಿಂದ ಮುಂಬರುವ ತಿಂಗಳುಗಳಲ್ಲಿ ಮತ್ತಷ್ಟು ಉತ್ಪಾದನೆ ಕುಸಿತವಾಗುವ ಆತಂಕ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

 

Tags:
error: Content is protected !!