Mysore
21
mist

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಗುಜರಾತ್: ರಾಜ್‌ಕೋಟ್ ನ ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಡ: 24 ಮಂದಿ ಸಾವು

ರಾಜ್‌ಕೋಟ್:‌ ಗುಜರಾತ್‌ನ ರಾಜ್‌ಕೋಟ್‌ ನಗರದಲ್ಲಿರುವ ಗೇಮಿಂಗ್‌ ಝೋನ್‌ನಲ್ಲಿ ಶನಿವಾರ(ಮೇ.25) ಬೆಂಕಿ ಅವಘಡ ಸಂಭವಿಸಿದ್ದು, 24 ಮಂದಿ ಮೃತಪಟ್ಟಿದ್ದಾರೆ.

ಈ ಅಗ್ನಿ ದುರಂತದಲ್ಲಿ 12 ಮಕ್ಕಳು ಸೇರಿದಂತೆ 24 ಮಂದಿ ಮೃತಪಟ್ಟಿದ್ದು, ಹಲವರು ಮಂದಿ ಸಿಲುಕಿರುವ ಬಗ್ಗೆ ಪಿಟಿಐ ವರದಿ ಮಾಡಿದೆ.

ಬೆಂಕಿಯ ಕೆನ್ನಾಲಿಗೆಯಿಂದ ಗೇಮ್‌ ಝೋನ್‌ ಸಂಪೂರ್ಣ ಕುಸಿದಿದೆ. ಬೀಸುವ ಗಾಳಿಯಿಂದಾಗಿ ಬೆಂಕಿ ಇನ್ನಷ್ಟು ಜೋರಾಗಿ ಉರಿಯುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೊಗೆಯ ಪ್ರಮಾಣ ಹೆಚ್ಚಾಗಿದ್ದು, ಒಳಗೆ ಸಿಲುಕಿದವರ ಚೀರಾಟ, ಹೊರಗಿದ್ದವರ ಆಕ್ರಂದನ ಮುಗಿಲುಮುಟ್ಟಿದೆ.

ಬೆಂಕಿ ಅವಘಡಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ. ಬೆಂಕಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಮುಂದುವರೆಯುತ್ತಿದೆ ಎಂದು ತಿಳಿದು ಬಂದಿದೆ.

Tags: